unfoldingWord 34 - ಯೇಸು ಇತರ ಕಥೆಗಳನ್ನು ಹೇಳಿದನು
개요: Matthew 13:31-46; Mark 4:26-34; Luke 13:18-21;18:9-14
스크립트 번호: 1234
언어: Kannada
청중: General
목적: Evangelism; Teaching
Features: Bible Stories; Paraphrase Scripture
지위: Approved
이 스크립트는 다른 언어로 번역 및 녹음을위한 기본 지침입니다. 그것은 그것이 사용되는 각 영역에 맞게 다른 문화와 언어로 조정되어야 합니다. 사용되는 몇 가지 용어와 개념은 다른 문화에서는 다듬어지거나 생략해야 할 수도 있습니다.
스크립트 텍스트
ಯೇಸು ದೇವರ ರಾಜ್ಯದ ಕುರಿತು ಅನೇಕ ಕಥೆಗಳನ್ನು ಜನರಿಗೆ ಹೇಳಿದನು. ಉದಾಹರಣೆಗೆ, ಆತನು, "ದೇವರ ರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು. ಅದು ಅತಿ ಸಣ್ಣ ಬೀಜವಾಗಿದೆ ಎಂದು ನಿಮಗೆ ತಿಳಿದಿದೆ.”
“ಆದರೂ ಅದು ಬೆಳೆದ ಮೇಲೆ ತೋಟದ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ.”
ಯೇಸು, "ದೇವರ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಒಬ್ಬ ಸ್ತ್ರೀಯು ಹಿಟ್ಟೆಲ್ಲಾ ಹುಳಿಯಾಗುವಷ್ಟರ ಮಟ್ಟಿಗೆ ಅದನ್ನು ರೊಟ್ಟಿಯ ಹಿಟ್ಟಿನಲ್ಲಿ ಕಲಸಿಡುತ್ತಾಳೆ." ಎಂಬ ಮತ್ತೊಂದು ಕಥೆಯನ್ನು ಹೇಳಿದನು
"ದೇವರ ರಾಜ್ಯವು ಒಬ್ಬನು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಮತ್ತೊಬ್ಬನು ಆ ನಿಧಿಯನ್ನು ಕಂಡುಕೊಂಡು, ಅದು ಬೇಕೆಂದು ಬಹಳವಾಗಿ ಬಯಸಿದನು. ಆದ್ದರಿಂದ ಅವನು ಅದನ್ನು ಮತ್ತೆ ಮುಚ್ಚಿಟ್ಟನು. ಅವರು ಸಂತೋಷದಿಂದ ತುಂಬಿದವನಾಗಿ ಹೊರಟು ಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ನಿಧಿಯಿದ್ದ ಆ ಹೊಲವನ್ನು ಕೊಂಡುಕೊಂಡನು."
"ದೇವರ ರಾಜ್ಯವು ಬಹು ಬೆಲೆಯುಳ್ಳ ಪರಿಪೂರ್ಣವಾದ ಮುತ್ತಿಗೆ ಹೋಲಿಕೆಯಾಗಿದೆ. ಮುತ್ತಿನ ವರ್ತಕನು ಅದನ್ನು ಕಂಡುಕೊಂಡಾಗ, ಅವನು ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು."
ತಾವು ಒಳ್ಳೆಯದನ್ನು ಮಾಡುತ್ತಿರುವುದರಿಂದ ದೇವರು ತಮ್ಮನ್ನು ಅಂಗೀಕರಿಸಿಕೊಳ್ಳವನೆಂದು ಭಾವಿಸಿದಂಥ ಜನರಿದ್ದರು. ಈ ಜನರು ಒಳ್ಳೆಯದನ್ನು ಮಾಡದ ಇತರರನ್ನು ತಾತ್ಸಾರಮಾಡುತ್ತಿದ್ದರು. ಆದ್ದರಿಂದ ಯೇಸು ಅವರಿಗೆ ಈ ಕಥೆಯನ್ನು ಹೇಳಿದನು: "ಇಬ್ಬರು ಮನುಷ್ಯರಿದ್ದರು, ಅವರಿಬ್ಬರು ಪ್ರಾರ್ಥನೆ ಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ತೆರಿಗೆ ವಸೂಲಿಗಾರನಾಗಿದ್ದನು ಮತ್ತು ಇನ್ನೊಬ್ಬನು ಧಾರ್ಮಿಕ ಮುಖಂಡನಾಗಿದ್ದನು."
"ಧಾರ್ಮಿಕ ಮುಖಂಡನು ಈ ರೀತಿ ಪ್ರಾರ್ಥಿಸಿದನು: ‘ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಜನರಂತೆಯೂ ಅಥವಾ ಈ ಸುಂಕದವನಂತೆಯ ನಾನು ಪಾಪಿಯಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ.’”
“’ಉದಾಹರಣೆಗೆ, ನಾನು ವಾರಕ್ಕೆ ಎರಡು ಬಾರಿ ಉಪವಾಸ ಮಾಡುತ್ತೇನೆ ಮತ್ತು ನಾನು ಪಡೆಯುವ ಎಲ್ಲಾ ಹಣದಲ್ಲಿ ಮತ್ತು ಪಧಾರ್ಥಗಳಲ್ಲಿ ಹತ್ತರಷ್ಟು ಭಾಗವನ್ನು ನೀಡುತ್ತೇನೆ.’”
“ಆದರೆ ತೆರಿಗೆ ವಸೂಲಿಗಾರನು ಧಾರ್ಮಿಕ ಮುಖಂಡನಿಂದ ದೂರದಲ್ಲಿ ನಿಂತುಕೊಂಡನು. ಅವನು ಆಕಾಶದ ಕಡೆಗೆ ನೋಡಲಿಲ್ಲ. ಆದರೆ ಅವನು ತನ್ನ ಮುಷ್ಠಿಯಿಂದ ತನ್ನ ಎದೆಯನ್ನು ಬಡುಕೊಳ್ಳುತ್ತಾ, ‘ದೇವರೇ, ಪಾಪಿಯಾದ ನನ್ನನ್ನು ಕರುಣಿಸು' ಎಂದು ಪ್ರಾರ್ಥಿಸಿದನು."
ಆಗ ಯೇಸು, "ತೆರಿಗೆ ವಸೂಲಿಗಾರನ ಪ್ರಾರ್ಥನೆಯನ್ನು ದೇವರು ಕೇಳಿದನು ಮತ್ತು ಅವನನ್ನು ನೀತಿವಂತನೆಂದು ಘೋಷಿಸಿದನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ಆತನು ಧಾರ್ಮಿಕ ಮುಖಂಡನ ಪ್ರಾರ್ಥನೆಯನ್ನು ಇಷ್ಟಪಡಲಿಲ್ಲ. ದೇವರು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನನ್ನು ಅವಮಾನಿಸುವನು, ಆದರೆ ತನ್ನನ್ನು ತಗ್ಗಿಸಿಕೊಳ್ಳುವವನು ಆತನು ಸನ್ಮಾನಿಸುವನು."