unfoldingWord 23 - ಯೇಸುವಿನ ಜನನ
概要: Matthew 1-2; Luke 2
文本編號: 1223
語言: Kannada
聽眾: General
目的: Evangelism; Teaching
Features: Bible Stories; Paraphrase Scripture
狀態: Approved
腳本是翻譯和錄製成其他語言的基本指南,它們需要根據實際需要而進行調整以適合不同的文化和語言。某些使用術語和概念可能需要有更多的解釋,甚至要完全更換或省略。
文本文字
ಮರಿಯಳಿಗೆ ಯೋಸೇಫನೆಂಬ ಸಜ್ಜನ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಮರಿಯಳು ಗರ್ಭಿಣಿಯಾಗಿದ್ದಾಳೆಂದು ಅವನು ಕೇಳಿದಾಗ, ಅದು ತನ್ನ ಮಗುವಲ್ಲ ಎಂದು ಅವನಿಗೆ ತಿಳಿದಿತ್ತು. ಆದರೂ, ಅವನು ಮರಿಯಳನ್ನು ಅವಮಾನ ಮಾಡ ಬಯಸಲಿಲ್ಲ, ಆದ್ದರಿಂದ ಅವನು ಅವಳ ಮೇಲೆ ಕರುಣೆ ತೋರಿ ಅವಳನ್ನು ರಹಸ್ಯವಾಗಿ ಬಿಟ್ಟುಬಿಡಬೇಕೆಂದು ನಿರ್ಧರಿಸಿದನು. ಆದರೆ ಅವನು ಹಾಗೆ ಮಾಡುವ ಮುನ್ನ, ದೇವದೂತನು ಕನಸ್ಸಿನಲ್ಲಿ ಅವನ ಬಳಿಗೆ ಬಂದು ಅವನ ಸಂಗಡ ಮಾತನಾಡಿದನು.
ದೇವದೂತನು, "ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ. ಆಕೆಯು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ ಯೇಸು (ಅಂದರೆ ‘ಯೆಹೋವನು ರಕ್ಷಿಸುವನು’ ಎಂದರ್ಥ) ಎಂದು ಹೆಸರಿಡಬೇಕು, ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು" ಎಂದು ಹೇಳಿದನು.
ಆದ್ದರಿಂದ ಯೋಸೇಫನು ಮರಿಯಳನ್ನು ಮದುವೆಯಾದನು ಮತ್ತು ಅವಳನ್ನು ತನ್ನ ಹೆಂಡತಿಯಾಗಿ ತನ್ನ ಮನೆಗೆ ಕರೆದುಕೊಂಡು ಹೋದನು, ಆದರೆ ಅವನು ಆಕೆಯು ಜನ್ಮನೀಡುವವರೆಗೂ ಆಕೆಯೊಡನೆ ಮಲಗಲಿಲ್ಲ.
ಮರಿಯಳು ಜನ್ಮ ನೀಡುವ ಸಮಯ ಹತ್ತಿರವಾದಾಗ, ಅವಳು ಮತ್ತು ಯೋಸೇಫನು ಬೇತ್ಲೆಹೇಮ್ ಎಂಬ ಊರಿಗೆ ದೀರ್ಘ ಪ್ರಯಾಣ ಮಾಡಿದರು. ಅವರು ಅಲ್ಲಿಗೆ ಹೋಗಬೇಕಾಗಿತು ಏಕೆಂದರೆ ರೋಮಾನ್ ಅಧಿಕಾರಿಗಳು ಇಸ್ರಾಯೇಲ್ ದೇಶದಲ್ಲಿದ್ದ ಜನಸಂಖ್ಯೆಯನ್ನು ತಿಳಿದುಕೊಳ್ಳಲು ಬಯಸಿದ್ದರು. ಪ್ರತಿಯೊಬ್ಬರೂ ತಮ್ಮ ಪೂರ್ವಿಕರು ವಾಸಿಸುತ್ತಿದ್ದ ಸ್ಥಳಕ್ಕೆ ಹೋಗಬೇಕೆಂದು ಅವರು ಬಯಸಿದ್ದರು. ಅರಸನಾದ ದಾವೀದನು ಬೇತ್ಲೆಹೇಮಿನಲ್ಲಿ ಹುಟ್ಟಿದವನಾಗಿದ್ದು ಅವನು ಮರಿಯ ಮತ್ತು ಯೋಸೇಫ್ ಇವರಿಬ್ಬರಿಗೂ ಪೂರ್ವಿಕನಾಗಿದ್ದನು.
ಮರಿಯಳು ಮತ್ತು ಯೋಸೇಫನು ಬೇತ್ಲೆಹೇಮಿಗೆ ಹೋದರು, ಕೆಲವು ಪ್ರಾಣಿಗಳನ್ನು ಇಟ್ಟಿದ್ದ ಸ್ಥಳವನ್ನು ಬಿಟ್ಟರೆ, ಅಲ್ಲಿ ಇಳಿದುಕೊಳ್ಳಲು ಅವರಿಗೆ ಬೇರೆ ಸ್ಥಳವಿರಲಿಲ್ಲ. ಮರಿಯಳು ಅಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡಿದಳು. ಆತನಿಗೆ ಹಾಸಿಗೆಯಿಲ್ಲದಿರುವುದರಿಂದ ಅವಳು ಅವನನ್ನು ಗೋದಲಿಯಲ್ಲಿ ಮಲಗಿಸಿದಳು . ಅವರು ಆತನಿಗೆ ಯೇಸು ಎಂದು ಹೆಸರಿಟ್ಟರು.
ಆ ರಾತ್ರಿಯಲ್ಲಿ, ಅದರ ಹತ್ತಿರವಿದ್ದ ಹೊಲದಲ್ಲಿ ಕೆಲವು ಕುರುಬರು ತಮ್ಮ ಹಿಂಡುಗಳನ್ನು ಕಾಯುತ್ತಿದ್ದ ರು. ಇದ್ದಕ್ಕಿದ್ದಂತೆ, ಪ್ರಕಾಶಿಸುವ ದೂತನೊಬ್ಬನು ಅವರಿಗೆ ಕಾಣಿಸಿಕೊಂಡನು ಆಗ ಅವರು ಬಹಳವಾಗಿ ಹೆದರಿದರು. ದೇವದೂತನು ಅವರಿಗೆ , "ಹೆದರಬೇಡಿರಿ, ಯಾಕೆಂದರೆ ನಾನು ನಿಮಗೋಸ್ಕರ ಶುಭವಾರ್ತೆಯನ್ನು ತಂದಿದ್ದೇನೆ, ಕರ್ತನಾಗಿರುವ ಮೆಸ್ಸೀಯನು, ಬೇತ್ಲೆಹೇಮಿನಲ್ಲಿ ಹುಟ್ಟಿದ್ದಾನೆ!" ಎಂದು ಹೇಳಿದನು.
ಮತ್ತು ಅ ದೂತನು ಅವರಿಗೆ "ಹೋಗಿರಿ, ಮಗುವನ್ನು ಹುಡುಕಿರಿ, ಮತ್ತು ಆತನನ್ನು ಬಟ್ಟೆಯಿಂದ ಸುತ್ತಿ, ಗೋದಲಿಯಲ್ಲಿ ಮಲಗಿಸಿರುವುದನ್ನು ನೀವು ಕಾಣುತ್ತೀರಿ." ಎಂದು ಹೇಳಿದನು . ಆಗ ಇದ್ದಕ್ಕಿದ್ದಂತೆ, ಆಕಾಶದಲ್ಲಿ ವೆಲ್ಲಾ ದೇವದೂತರ ಸೈನ್ಯವು ಕಾಣಿಸಿತು . ಅವರು ದೇವರನ್ನು ಸ್ತುತಿಸುತ್ತಾ , "ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮನುಷ್ಯರೊಳಗೆ ಸಮಾಧಾನ" ಎಂದು ಹೇಳಿದರು.
ಅನಂತರ ದೇವದೂತರು ಹೊರಟುಹೋದರು. ಕುರುಬರು ಕೂಸನ್ನು ನೋಡಲು ತಮ್ಮ ಕುರಿಗಳನ್ನು ಬಿಟ್ಟುಹೋದರು. ಅವರು ಯೇಸುವಿದ್ದ ಸ್ಥಳಕ್ಕೆ ಬಂದರು ಮತ್ತು ದೇವದೂತನು ತಮಗೆ ಹೇಳಿದಂತೆಯೇ, ಆತನನ್ನು ಗೋದಲಿಯಲ್ಲಿ ಮಲಗಿಸಿರುವುದನ್ನು ಅವರು ಕಂಡುಕೊಂಡರು. ಅವರು ಬಹಳ ಸಂತೋಷಿಸಿದರು. ಅನಂತರ ಕುರುಬರು ತಮ್ಮ ಕುರಿಗಳಿದ್ದ ಹೊಲಗಳಿಗೆ ಹಿಂದಿರುಗಿ ಹೋದರು. ಅವರು ತಾವು ಕೇಳಿದಂಥ ಮತ್ತು ನೋಡಿದಂಥ ಎಲ್ಲಾ ಸಂಗತಿಗಳಿಗಾಗಿ ದೇವರನ್ನು ಸ್ತುತಿಸಿದರು.
ದೂರದ ಪೂರ್ವದ ದೇಶದಲ್ಲಿ ಕೆಲವು ಮಂದಿ ಪುರುಷರಿದ್ದರು. ಅವರು ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು ಬಹಳ ಬುದ್ಧಿವಂತರಾಗಿದ್ದರು. ಅವರು ಆಕಾಶದಲ್ಲಿ ಅಸಾಮಾನ್ಯವಾದ ನಕ್ಷತ್ರವನ್ನು ನೋಡಿದರು. ಆ ನಕ್ಷತ್ರ ಯೆಹೂದ್ಯರ ಹೊಸ ಅರಸನು ಹುಟ್ಟಿದ್ದಾನೆಂದು ಸೂಚಿಸುತ್ತದೆ ಎಂದು ಅವರು ಹೇಳಿದರು. ಆದ್ದರಿಂದ ಅವರು ಮಗುವನ್ನು ನೋಡಲು ತಮ್ಮ ದೇಶದಿಂದ ಪ್ರಯಾಣ ಬೆಳೆಸಲು ನಿರ್ಧರಿಸಿದರು. ದೀರ್ಘ ಪ್ರಯಾಣದ ನಂತರ, ಅವರು ಬೇತ್ಲೆಹೇಮಿಗೆ ಬಂದು ಯೇಸು ಮತ್ತು ಅವನ ತಂದೆತಾಯಿಗಳು ವಾಸಿಸುತ್ತಿದ್ದ ಮನೆಯನ್ನು ಕಂಡುಕೊಂಡರು.
ಈ ಮನುಷ್ಯರು ಆತನ ತಾಯಿಯ ಬಳಿಯಲ್ಲಿರುವ ಯೇಸುವನ್ನು ನೋಡಿದಾಗ ಅವರು ಅಡ್ಡಬಿದ್ದು ಆತನನ್ನು ಆರಾಧಿಸಿದರು. ಅವರು ಯೇಸುವಿಗೆ ಅತ್ಯುತ್ತಮವಾದ ಕಾಣಿಕೆಗಳನ್ನು ಅರ್ಪಿಸಿದರು . ಅನಂತರ ಅವರು ಮನೆಗೆ ಹಿಂದಿರುಗಿ ಹೋದರು.