unfoldingWord 17 - ದಾವೀದನೊಂದಿಗೆ ದೇವರ ಒಡಂಬಡಿಕೆ
概要: 1 Samuel 10; 15-19; 24; 31; 2 Samuel 5; 7; 11-12
文本编号: 1217
语言: Kannada
听众: General
目的: Evangelism; Teaching
Features: Bible Stories; Paraphrase Scripture
状态: Approved
脚本是翻译和录制成其他语言的基本指南,它们需要根据实际需要而进行调整以适合不同的文化和语言。某些使用术语和概念可能需要有更多的解释,甚至要完全更换或省略。
文本正文
ಸೌಲನು ಇಸ್ರಾಯೇಲಿನ ಮೊದಲನೆಯ ಅರಸನಾಗಿದ್ದನು. ಜನರು ಬಯಸಿದಂತೆಯೇ ಅವನು ಎತ್ತರವುಳ್ಳವನು ಮತ್ತು ಸುಂದರನು ಆಗಿದ್ದನು. ಸೌಲನು ಇಸ್ರಾಯೇಲನ್ನು ಆಳಿದ ಮೊದಲ ಕೆಲವು ವರ್ಷಗಳು ಒಳ್ಳೆಯ ಅರಸನಾಗಿದ್ದನು. ಆದರೆ ಅವನು ದೇವರಿಗೆ ವಿಧೇಯನಾಗದ ದುಷ್ಟ ಮನುಷ್ಯನಾದನು, ಆದ್ದರಿಂದ ಮುಂದೊಂದು ದಿನ ಅವನ ಸ್ಥಳದಲ್ಲಿ ಅರಸನಾಗುವುದಕ್ಕಾಗಿ ಬೇರೊಬ್ಬ ಮನುಷ್ಯನನ್ನು ದೇವರು ಆರಿಸಿಕೊಂಡನು.
ದೇವರು ದಾವೀದನೆಂಬ ಹೆಸರುಳ್ಳ ಒಬ್ಬ ಇಸ್ರಾಯೇಲಿನ ಯುವಕನನ್ನು ಆರಿಸಿಕೊಂಡನು ಮತ್ತು ಸೌಲನ ಬಳಿಕ ಅವನನ್ನು ಅರಸನನ್ನಾಗಿ ರೂಪಿಸಲು ಅವನನ್ನು ಸಿದ್ಧಮಾಡತೊಡಗಿದನು. ದಾವೀದನು ಬೇತ್ಲೆಹೇಮ್ ಎಂಬ ಊರಿನ ಒಬ್ಬ ಕುರುಬನಾಗಿದ್ದನು. ದಾವೀದನು ತನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದಾಗ ಅವುಗಳ ಮೇಲೆ ದಾಳಿ ಮಾಡಿದಂಥ ಸಿಂಹವನ್ನು ಮತ್ತು ಕರಡಿಗಳನ್ನು ವಿವಿಧ ಸಮಯಗಳಲ್ಲಿ ಎದುರಿಸಿ ಕೊಂದುಹಾಕಿದನು. ದಾವೀದನು ದೀನನು ಮತ್ತು ನೀತಿವಂತನಾಗಿದ್ದನು. ಅವನು ದೇವರನ್ನು ನಂಬಿದ್ದನು ಮತ್ತು ಆತನಿಗೆ ವಿಧೇಯನಾಗಿದ್ದನು.
ದಾವೀದನು ಇನ್ನೂ ಯುವಕನಾಗಿದ್ದಾಗ, ಗೊಲ್ಯಾತ್ ಎಂಬ ದೈತ್ಯನ ವಿರುದ್ಧ ಹೋರಾಡಿದನು. ಗೊಲ್ಯಾತನು ತುಂಬಾ ಒಳ್ಳೆಯ ಸೈನಿಕನಾಗಿದ್ದನು. ಅವರು ಬಹಳ ಶಕ್ತಿಶಾಲಿಯಾಗಿದ್ದನು ಮತ್ತು ಸುಮಾರು ಮೂರು ಮೀಟರ್ ಎತ್ತರವಿದ್ದನು! ಆದರೆ ದೇವರು ದಾವೀದನಿಗೆ ಗೊಲ್ಯಾತನನ್ನು ಕೊಂದು ಇಸ್ರಾಯೇಲನ್ನು ರಕ್ಷಿಸಲು ಸಹಾಯಮಾಡಿದನು. ಅದಾದ ನಂತರ, ದಾವೀದನು ಇಸ್ರಾಯೇಲ್ಯರ ಶತ್ರುಗಳ ಮೇಲೆ ಅನೇಕ ಜಯಗಳನ್ನು ಸಾಧಿಸಿದನು. ದಾವೀದನು ಮಹಾ ಸೈನಿಕನಾಗಿ ಮಾರ್ಪಟ್ಟನು ಮತ್ತು ಅವನು ಅನೇಕ ಯುದ್ಧಗಳಲ್ಲಿ ಇಸ್ರಾಯೇಲ್ ಸೈನ್ಯವನ್ನು ಮುನ್ನಡೆಸಿದನು. ಜನರು ಅವನನ್ನು ತುಂಬಾ ಹೊಗಳಿದರು.
ಜನರು ದಾವೀದನನ್ನು ಅಧಿಕವಾಗಿ ಪ್ರೀತಿಸಿದ ಕಾರಣ ಅರಸನಾದ ಸೌಲನಿಗೆ ಅವನ ಮೇಲೆ ಹೊಟ್ಟೆಕಿಚ್ಚು ಉಂಟಾಗಿತು. ಅಂತಿಮವಾಗಿ ಸೌಲನು ಅವನನ್ನು ಕೊಲ್ಲಲು ಒಳಸಂಚ್ಚು ರೋಪಿಸಿದ್ದನು, ಆದ್ದರಿಂದ ದಾವೀದನು ಅವನಿಂದ ಮತ್ತು ಅವನ ಸೈನಿಕರಿಂದ ತಪ್ಪಿಸಿಕೊಂಡು ಅಡಗಿಕೊಳ್ಳಲು ಅರಣ್ಯಕ್ಕೆ ಓಡಿಹೋದನು. ಒಂದು ದಿನ ಸೌಲನು ಮತ್ತು ಅವನ ಸೈನಿಕರು ಅವನನ್ನು ಹುಡುಕುತ್ತಿರುವಾಗ ಸೌಲನು ಒಂದು ಗುಹೆಯೊಳಕ್ಕೆ ಹೋದನು. ಅಲ್ಲಿ ದಾವೀದನೂ ಅಡಗಿಕೊಂಡಿದ್ದನ್ನು. ಅದರೆ ಸೌಲನು ಅವನನ್ನು ನೋಡಲಿಲ್ಲ. ದಾವೀದನು ಸೌಲನ ಹಿಂಬದಿಯಿಂದ ಅವನ ಹತ್ತಿರಕ್ಕೆ ಹೋಗಿ, ಅವನ ಬಟ್ಟೆಯ ತುದಿಯನ್ನು ಕತ್ತರಿಸಿ ತನ್ನ ವಶದಲ್ಲಿ ಇಟ್ಟುಕೊಂಡನು. ಅನಂತರ, ಸೌಲನು ಗುಹೆಯನ್ನು ಬಿಟ್ಟುಹೋಗುವ ಸಮಯದಲ್ಲಿ ದಾವೀದನು ತನ್ನ ವಶದಲ್ಲಿದ್ದ ಬಟ್ಟೆಯ ತುಂಡನ್ನು ನೋಡಬೇಕೆಂದು ಅರಸನಾದ ಸೌಲನಿಗೆ ಕೂಗಿ ಹೇಳಿದನು. ದಾವೀದನು ಅರಸನಾಗುವುದಕ್ಕಾಗಿ ತನ್ನನ್ನು ಕೊಲ್ಲಲು ಮುಂದಾಗಲಿಲ್ಲ ಎನ್ನುವ ಸತ್ಯ ಸೌಲನಿಗೆ ತಿಳಿದುಬಂತ್ತು.
ಸ್ವಲ್ಪ ಸಮಯದ ನಂತರ, ಸೌಲನು ಯುದ್ಧದಲ್ಲಿ ಸತ್ತುಹೋದನು, ಮತ್ತು ದಾವೀದನು ಇಸ್ರಾಯೇಲಿನ ಅರಸನಾದನು. ಅವನು ಒಳ್ಳೆಯ ಅರಸನಾಗಿದ್ದನು ಮತ್ತು ಜನರು ಅವನನ್ನು ಪ್ರೀತಿಸುತ್ತಿದ್ದರು. ದೇವರು ದಾವೀದನನ್ನು ಆಶೀರ್ವದಿಸಿ, ಅವನನ್ನು ಜಯಶಾಲಿಯನ್ನಾಗಿ ಮಾಡಿದನು. ದಾವೀದನು ಅನೇಕ ಯುದ್ಧಗಳನ್ನು ಮಾಡಿದನು, ಇಸ್ರಾಯೇಲ್ಯರ ಶತ್ರುಗಳನ್ನು ಸೋಲಿಸಲು ದೇವರು ಅವನಿಗೆ ಸಹಾಯಮಾಡಿದನು. ದಾವೀದನು ಯೆರೂಸಲೇಮ್ ನಗರವನ್ನು ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು, ಅಲ್ಲಿಯೇ ಅವನು ವಾಸಿಸುತ್ತಿದ್ದನು ಮತ್ತು ಆಳುತ್ತಿದ್ದನು. ದಾವೀದನು ನಲವತ್ತು ವರ್ಷಗಳ ಕಾಲ ಅರಸನಾಗಿದ್ದನು. ಈ ಸಮಯದಲ್ಲಿ ಇಸ್ರಾಯೇಲ್ ದೇಶ ಬಲಿಷ್ಠ ಮತ್ತು ಶ್ರೀಮಂತ ದೇಶವಾಯಿತು.
ಇಸ್ರಾಯೇಲ್ಯರೆಲ್ಲರು ದೇವರನ್ನು ಆರಾಧಿಸಿ ಆತನಿಗೆ ಯಜ್ಞವನ್ನರ್ಪಿಸುವುದಕ್ಕಾಗುವಂತೆ ದೇವಾಲಯವನ್ನು ಕಟ್ಟಬೇಕೆಂದು ದಾವೀದನು ಬಯಸಿದನು. ಜನರು ಸುಮಾರು 400 ವರ್ಷಗಳಿಂದ ಮೋಶೆಯು ಮಾಡಿಸಿದ್ದ ದೇವದರ್ಶನ ಗುಡಾರದಲ್ಲಿ ದೇವರನ್ನು ಆರಾಧಿಸುತ್ತಿದ್ದರು ಮತ್ತು ಆತನಿಗೆ ಯಜ್ಞವನ್ನರ್ಪಿಸುತ್ತಿದ್ದರು.
ಆದರೆ ನಾತಾನ್ ಎಂಬ ಒಬ್ಬ ಪ್ರವಾದಿಯಿದ್ದನು. ದೇವರು : "ನೀನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೀ ಆದ್ದರಿಂದ ನೀನು ನನಗಾಗಿ ಈ ದೇವಾಲಯವನ್ನು ಕಟ್ಟಬಾರದು, ನಿನ್ನ ಮಗನು ಅದನ್ನು ಕಟ್ಟುವನು. ಆದರೂ ನಾನು ನಿನ್ನನ್ನು ಇನ್ನೂ ಅಧಿಕವಾಗಿ ಆಶೀರ್ವದಿಸುವೆನು. ನಿನ್ನ ಸಂತತಿಯವರಲ್ಲಿ ಒಬ್ಬನು ಅರಸನಾಗಿ ನನ್ನ ಜನರು ಶಾಶ್ವತವಾಗಿ ಆಳುವನು!" ಎಂಬ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕಾಗಿ ನಾತಾನನ್ನು ಕಳುಹಿಸಿದನು. ಶಾಶ್ವತವಾಗಿ ಆಳುವಂಥ ದಾವೀದನ ಏಕೈಕ ಸಂತತಿಯು ಮೆಸ್ಸೀಯನು ಮಾತ್ರವೇ. ಮೆಸ್ಸೀಯನು ದೇವರಿಂದ ಆರಿಸಿಕೊಳ್ಳಲ್ಪಟ್ಟವನಾಗಿದ್ದಾನೆ, ಆತನು ಲೋಕದ ಜನರನ್ನು ಅವರ ಪಾಪದಿಂದ ರಕ್ಷಿಸುವನು.
ದಾವೀದನು ನಾತಾನನ ಸಂದೇಶವನ್ನು ಕೇಳಿದಾಗ, ಅವನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಆತನನ್ನು ಸ್ತುತಿಸಿದನು. ದೇವರು ಅವನನ್ನು ಸನ್ಮಾನಿಸಿ ಅವನಿಗೆ ಅಧಿಕ ಆಶೀರ್ವಾದಗಳನ್ನು ದಯಪಾಲಿಸುತ್ತಿದ್ದನು. ದೇವರು ಈ ಕಾರ್ಯಗಳನ್ನು ಯಾವಾಗ ಮಾಡುವನೆಂದು ದಾವೀದನಿಗೆ ತಿಳಿದಿರಲಿಲ್ಲ. ಮೆಸ್ಸೀಯನ ಬರೋಣಕ್ಕಾಗಿ ಇಸ್ರಾಯೇಲ್ಯರು ದೀರ್ಘಕಾಲ ಅಂದರೆ ಸರಿಸುಮಾರು 1,000 ವರ್ಷಗಳ ವರೆಗೆ ಕಾಯಬೇಕಾಗಿತ್ತು ಎಂದು ನಮಗೆ ತಿಳಿದಿದೆ.
ದಾವೀದನು ತನ್ನ ಜನರನ್ನು ಅನೇಕ ವರ್ಷಗಳು ನ್ಯಾಯಯುತವಾಗಿ ಆಳಿದನು. ಅವನು ದೇವರಿಗೆ ತುಂಬಾ ವಿಧೇಯನಾದನು ಮತ್ತು ದೇವರು ಅವನನ್ನು ಆಶೀರ್ವದಿಸಿದನು. ಆದಾಗ್ಯೂ, ಅವನ ಜೀವನದ ಕೊನೆಯ ಸಮಯಗಳಲ್ಲಿ ಅವನು ದೇವರಿಗೆ ವಿರುದ್ಧವಾಗಿ ಘೋರವಾದ ಪಾಪಮಾಡಿದನು.
ಒಂದು ದಿನ ದಾವೀದನು ತನ್ನ ಅರಮನೆಯಿಂದ ನೋಡುತ್ತಿದ್ದಾಗ ಸುಂದರವಾದ ಸ್ತ್ರೀಯು ಸ್ನಾನ ಮಾಡುತ್ತಿರುವುದನ್ನು ಅವನು ಕಂಡನು. ಅವನಿಗೆ ಆಕೆಯು ಯಾರೆಂದು ಗೊತ್ತಿರಲಿಲ್ಲ, ಆದರೆ ಆಕೆಯ ಹೆಸರು ಬತ್ಷೆಬೆ ಎಂದು ವಿಚಾರಿಸಿ ತಿಳಿದುಕೊಂಡನು.
ಅದರಿಂದ ಮುಖವನ್ನು ತಿರುಗಿಸಿಕೊಳ್ಳುವುದನ್ನು ಬಿಟ್ಟು, ದಾವೀದನು ಅವಳನ್ನು ತನ್ನ ಬಳಿಗೆ ಕರೆತರುವಂತೆ ಒಬ್ಬನನ್ನು ಕಳುಹಿಸಿದನು. ಅವನು ಅವಳೊಂದಿಗೆ ಸಂಗಮಿಸಿದನು ಅನಂತರ ಅವಳನ್ನು ಮನೆಗೆ ಹಿಂತಿರುಗಿ ಕಳುಹಿಸಿದನು. ಸ್ವಲ್ಪ ಕಾಲವಾದ ನಂತರ ಬತ್ಷೆಬಳು ದಾವೀದನಿಗೆ ತಾನು ಗರ್ಭಿಣಿಯಾಗಿದ್ದಾನೆ ಎಂಬ ವರ್ತಮಾನ ಕಳುಹಿಸಿದಳು.
ಊರೀಯನೆಂಬವನು ಬತ್ಷೆಬಳ ಗಂಡನಾಗಿದ್ದನು. ಅವನು ದಾವೀದನ ಅತ್ಯುತ್ತಮ ಸೈನಿಕರಲ್ಲಿ ಒಬ್ಬನಾಗಿದ್ದನು. ಅವನು ಈ ಸಮಯದಲ್ಲಿ ಯುದ್ಧದಲ್ಲಿ ಹೋರಾಡುವುದಕ್ಕಾಗಿ ಹೋಗಿದ್ದನು. ದಾವೀದನು ಉರೀಯನನ್ನು ಯುದ್ಧದಿಂದ ಹಿಂದಕ್ಕೆ ಕರೆಯಿಸಿಕೊಂಡು ಅವನ ಹೆಂಡತಿಯ ಬಳಿಗೆ ಹೋಗಬೇಕೆಂದು ಅವನಿಗೆ ಹೇಳಿದನು. ಆದರೆ ಇನ್ನಿತರ ಸೈನಿಕರು ಯುದ್ಧದಲ್ಲಿರುವಾಗ ಊರೀಯನು ಮನೆಗೆ ಹೋಗಲು ನಿರಾಕರಿಸಿದನು. ಆದ್ದರಿಂದ ದಾವೀದನು ಊರೀಯನನ್ನು ತಿರುಗಿ ಯುದ್ಧಕ್ಕೆ ಕಳುಹಿಸಿದನು ಮತ್ತು ಅವನು ಕೊಲ್ಲಲ್ಪಡುವಂತೆ ಶತ್ರುಗಳು ಬಲಿಷ್ಠವಾಗಿರುವ ಕಡೆಯಲ್ಲಿ ಅವನನ್ನು ನಿಲ್ಲಿಸಬೇಕೆಂದು ಸೇನಾಧಿಪತಿಗೆ ಹೇಳಿದನು. ಹಾಗೆಯೇ ಆಯಿತು: ಊರೀಯನು ಯುದ್ಧದಲ್ಲಿ ಸತ್ತುಹೋದನು.
ಊರೀಯನು ಯುದ್ಧದಲ್ಲಿ ಸತ್ತುಹೋದ ನಂತರ, ದಾವೀದನು ಬತ್ಷೆಬಳನ್ನು ಮದುವೆಯಾದನು. ತರುವಾಯ, ಅವಳು ದಾವೀದನ ಮಗನಿಗೆ ಜನ್ಮ ನೀಡಿದಳು. ದಾವೀದನು ಮಾಡಿದಂಥದ್ದರ ಬಗ್ಗೆ ದೇವರು ಬಹಳ ಕೋಪಗೊಂಡನು, ಆದ್ದರಿಂದ ಆತನು ಅವನ ಪಾಪವು ಎಷ್ಟು ಕೆಟ್ಟದಾಗಿತ್ತು ಎಂದು ದಾವೀದನಿಗೆ ಹೇಳಲು ಪ್ರವಾದಿಯಾದ ನಾತಾನನನ್ನು ಕಳುಹಿಸಿದನು. ದಾವೀದನು ತನ್ನ ಪಾಪದ ಕುರಿತು ಪಶ್ಚಾತ್ತಾಪಪಟ್ಟನು, ದೇವರು ಅವನನ್ನು ಕ್ಷಮಿಸಿದನು. ದಾವೀದನು ಉಳಿದ ತನ್ನ ಜೀವಮಾನವೆಲ್ಲವು ಹಾಗೂ ಕಷ್ಟದ ಸಮಯಗಳಲ್ಲಿಯೂ ದೇವರನ್ನು ಅನುಸರಿಸಿದನು ಮತ್ತು ವಿಧೇಯನಾದನು.
ಆದರೆ ದಾವೀದನ ಗಂಡುಮಗುವು ಸತ್ತುಹೋಯಿತು. ಹೀಗೆ ದೇವರು ದಾವೀದನನ್ನು ಶಿಕ್ಷಿಸಿದನು. ಇಷ್ಟು ಮಾತ್ರವಲ್ಲದೆ, ದಾವೀದನು ಸಾಯುವವರೆಗೂ, ಅವನ ಸ್ವಂತ ಕುಟುಂಬದವರಲ್ಲಿ ಕೆಲವರು ಅವನಿಗೆ ವಿರುದ್ಧ ಕಾದಾಡಿದರು, ಮತ್ತು ದಾವೀದನು ಅಧಿಕ ಶಕ್ತಿಯನ್ನು ಕಳೆದುಕೊಂಡನು. ಆದರೆ ದೇವರು ನಂಬಿಗಸ್ತನಾಗಿದ್ದನು ಮತ್ತು ದಾವೀದನು ಆತನಿಗೆ ಅವಿಧೇಯನಾಗಿದ್ದರೂ ಕೂಡ ಆತನು ತಾನು ದಾವೀದನಿಗೆ ಏನು ಮಾಡುವೆನೆಂದು ವಾಗ್ದಾನ ಮಾಡಿದ್ದನೋ ಅದನ್ನೇ ಆತನು ಅವನಿಗೆ ಮಾಡಿದನು. ತರುವಾಯ ದಾವೀದನು ಮತ್ತು ಬತ್ಷೆಬಳು ಮತ್ತೊಬ್ಬ ಮಗನನ್ನು ಪಡೆದು, ಅವನಿಗೆ ಸೊಲೊಮೋನ್ ಎಂದು ಹೆಸರಿಟ್ಟರು.