unfoldingWord 48 - ಯೇಸು ವಾಗ್ದತ್ತ ಮೆಸ್ಸೀಯನಾಗಿದ್ದಾನೆ
概要: Genesis 1-3, 6, 14, 22; Exodus 12, 20; 2 Samuel 7; Hebrews 3:1-6, 4:14-5:10, 7:1-8:13, 9:11-10:18; Revelation 21
文本編號: 1248
語言: Kannada
聽眾: General
目的: Evangelism; Teaching
Features: Bible Stories; Paraphrase Scripture
狀態: Approved
腳本是翻譯和錄製成其他語言的基本指南,它們需要根據實際需要而進行調整以適合不同的文化和語言。某些使用術語和概念可能需要有更多的解釋,甚至要完全更換或省略。
文本文字
ದೇವರು ಲೋಕವನ್ನು ಸೃಷ್ಟಿಸಿದಾಗ, ಎಲ್ಲವೂ ಪರಿಪೂರ್ಣವಾಗಿತ್ತು. ಪಾಪವಿರಲಿಲ್ಲ. ಆದಾಮ ಹವ್ವರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು, ಮತ್ತು ಅವರು ಸಹ ದೇವರನ್ನು ಪ್ರೀತಿಸುತ್ತಿದ್ದರು. ಅಲ್ಲಿ ರೋಗವಾಗಲಿ ಅಥವಾ ಮರಣವಾಗಲಿ ಇರಲಿಲ್ಲ. ಲೋಕವು ಹೀಗಿರಬೇಕೆಂದು ದೇವರು ಬಯಸಿದ್ದನು.
ಸೈತಾನನು ತೋಟದಲ್ಲಿ ಹವ್ವಳ ಸಂಗಡ ಸರ್ಪದ ಮೂಲಕ ಮಾತನಾಡಿದನು, ಏಕೆಂದರೆ ಅವನು ಅವಳನ್ನು ಮೋಸಗೊಳಿಸಬೇಕೆಂದು ಬಯಸಿದನು. ಆಗ ಅವಳು ಮತ್ತು ಆದಾಮನು ದೇವರಿಗೆ ವಿರೋಧವಾಗಿ ಪಾಪಮಾಡಿದರು. ಅವರು ಪಾಪಮಾಡಿದ ಕಾರಣ ಭೂಮಿಯ ಮೇಲಿರುವ ಎಲ್ಲರು ಸಾಯುಬೇಕಾಯಿತು.
ಆದಾಮ ಹವ್ವರು ಪಾಪಮಾಡಿದ್ದರಿಂದ, ಇನ್ನೂ ಹೆಚ್ಚಿನ ಕೆಡುಕು ಸಂಭವಿಸಿತು. ಅವರು ದೇವರಿಗೆ ಶತ್ರುಗಳಾಗಿ ಮಾರ್ಪಟ್ಟರು. ಇದರ ಪರಿಣಾಮವಾಗಿ, ಅಂದಿನಿಂದ ಪ್ರತಿಯೊಬ್ಬ ವ್ಯಕ್ತಿಯು ಪಾಪ ಮಾಡಿದವನಾದನು. ಪ್ರತಿಯೊಬ್ಬ ವ್ಯಕ್ತಿಯು ಜನ್ಮತಃ ದೇವರಿಗೆ ಶತ್ರುವಾದನು . ಜನರು ಹಾಗೂ ದೇವರ ನಡುವೆ ಸಮಾಧಾನ ಇರಲಿಲ್ಲ. ಆದರೆ ದೇವರು ಸಮಾಧಾನವನ್ನುಂಟು ಮಾಡಲು ಬಯಸಿದನು.
ಹವ್ವಳ ಸಂತಾನದವರಲ್ಲಿ ಒಬ್ಬನು ಸೈತಾನನ ತಲೆಯನ್ನು ಜಜ್ಜುವನೆಂದು . ಸೈತಾನನು ಆತನ ಹಿಮ್ಮಡಿಯನ್ನು ಕಚ್ಚುವೆನೆಂದು ದೇವರು ವಾಗ್ದಾನ ಮಾಡಿದನು ಸ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸೈತಾನನು ಮೆಸ್ಸೀಯನನ್ನು ಕೊಲ್ಲುವನು, ಆದರೆ ದೇವರು ಆತನನ್ನು ಬದುಕಿಸುವನು. ಅದಾದ ನಂತರ, ಮೆಸ್ಸೀಯನು ಸೈತಾನನ ಶಕ್ತಿಯನ್ನು ಶಾಶ್ವತವಾಗಿ ತೆಗೆದುಹಾಕುವನು. ಅನೇಕ ವರ್ಷಗಳ ನಂತರ, ಯೇಸುವೇ ಮೆಸ್ಸೀಯನು ಎಂದು ದೇವರು ತೋರಿಸಿದನು.
ದೇವರು ತಾನು ಕಳುಹಿಸಲಿದ್ದ ಜಲಪ್ರಳಯದಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಹಡಗನ್ನು ಕಟ್ಟಬೇಕೆಂದು ಆತನು ನೋಹನಿಗೆ ಹೇಳಿದನು. ಹೀಗೆ ದೇವರು ತನ್ನಲ್ಲಿ ನಂಬಿಕೆಯಿಟ್ಟಿದ ಜನರನ್ನು ರಕ್ಷಿಸಿದನು. ಅದೇ ರೀತಿಯಾಗಿ ದೇವರ ಸಂಹಾರಕ್ಕೆ ಅವರೆಲ್ಲರು ಯೋಗ್ಯರಾಗಿದ್ದರು ಏಕೆಂದರೆ ಅವರು ಪಾಪಮಾಡಿದ್ದರು. ಆದರೆ ತನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನನ್ನು ರಕ್ಷಿಸಲು ದೇವರು ಯೇಸುವನ್ನು ಕಳುಹಿಸಿದನು.
ನಾನೂರು ವರ್ಷಗಳ ಕಾಲ ಯಾಜಕರು ದೇವರಿಗೆ ಯಜ್ಞವನ್ನು ಅರ್ಪಿಸುತ್ತಿದ್ದರು. ಅವರು ಪಾಪ ಮಾಡಿದ್ದಾರೆ ಎಂದು ಮತ್ತು ಅವರು ದೇವರ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ಇದು ಜನರಿಗೆ ತೋರಿಸುತ್ತದೆ. ಆದರೆ ಆ ಯಜ್ಞಗಳ ಅವರಿಗೆ ಪಾಪ ಕ್ಷಮಾಪಣೆ ದೊರಕಲ್ಲಿಲ್ಲ. ಯೇಸು ಶ್ರೇಷ್ಠನಾದ ಮಹಾಯಾಜಕನಾಗಿದ್ದು ಯಾಜಕರಿಂದ ಮಾಡಲಾಗದಂಥದ್ದನ್ನು ಆತನು ಮಾಡಿದನು. ಎಲ್ಲರ ಪಾಪವನ್ನು ನಿವಾರಿಸುವಂಥ ಏಕೈಕ ಯಜ್ಞವಾಗಿ ಆತನು ತನ್ನನ್ನು ತಾನು ಸಮರ್ಪಿಸಿಕೊಟ್ಟನು. ಅವರೆಲ್ಲರ ಪಾಪಗಳಿಗಾಗಿ ದೇವರು ತನ್ನನ್ನು ಶಿಕ್ಷಿಸಬೇಕೆಂಬುದನ್ನು ಆತನು ಅಂಗೀಕರಿಸಿಕೊಂಡನು. ಈ ಕಾರಣಕ್ಕಾಗಿಯೇ ಯೇಸು ಪರಿಪೂರ್ಣನಾದ ಮಹಾಯಾಜಕನಾಗಿದ್ದಾನೆ.
ದೇವರು ಅಬ್ರಹಾಮನಿಗೆ, "ನಾನು ನಿನ್ನ ಮೂಲಕ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳನ್ನು ಆಶೀರ್ವದಿಸುವೆನು" ಎಂದು ಹೇಳಿದನು. ಯೇಸು ಈ ಅಬ್ರಹಾಮನ ಸಂತಾನದವನಾಗಿದ್ದನು. ದೇವರು ಅಬ್ರಹಾಮನ ಮೂಲಕ ಎಲ್ಲಾ ಜನಾಂಗಗಳನ್ನು ಆಶೀರ್ವದಿಸುತ್ತಾನೆ, ಏಕೆಂದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರನ್ನು ದೇವರು ಪಾಪದಿಂದ ರಕ್ಷಿಸುತ್ತಾನೆ. ಈ ಜನರು ಯೇಸುವಿನಲ್ಲಿ ನಂಬಿಕೆಯಿಡುವಾಗ, ದೇವರು ಅವರನ್ನು ಅಬ್ರಹಾಮನ ಸಂತಾನದವರೆಂದು ಪರಿಗಣಿಸುತ್ತಾನೆ.
ದೇವರು ಅಬ್ರಹಾಮನಿಗೆ ಅವನ ಮಗನಾದ ಇಸಾಕನನ್ನು ತನಗೆ ಯಜ್ಞವಾಗಿ ಅರ್ಪಿಸಬೇಕೆಂದು ಹೇಳಿದನು. ಆದರೆ ದೇವರು ಇಸಾಕನಿಗೆ ಬದಲಾಗಿ ಯಜ್ಞಕ್ಕೋಸ್ಕರ ಒಂದು ಕುರಿಮರಿಯನ್ನು ಕೊಟ್ಟನು. ನಾವೆಲ್ಲರೂ ನಮ್ಮ ಪಾಪಗಳಿಗಾಗಿ ಸಾಯಲು ಅರ್ಹರಾಗಿದ್ದೇವು! ಆದರೆ ದೇವರು ನಮ್ಮ ಸ್ಥಾನದಲ್ಲಿ ಸಾಯಲು ಯೇಸುವನ್ನು ಯಜ್ಞವಾಗಿ ಕೊಟ್ಟನು. ಅದಕ್ಕಾಗಿಯೇ ನಾವು ಯೇಸುವನ್ನು ದೇವರ ಕುರಿಮರಿ ಎಂದು ಕರೆಯುತ್ತೇವೆ.
ದೇವರು ಈಜಿಪ್ಟಿನ ಮೇಲೆ ಕೊನೆಯ ಬಾಧೆಯನ್ನು ಬರಮಾಡಿದಾಗ, ಪ್ರತಿಯೊಂದು ಇಸ್ರಾಯೇಲ್ಯ ಕುಟುಂಬವು ಒಂದೊಂದು ಕುರಿಮರಿಯನ್ನು ಕೊಲ್ಲಬೇಕೆಂದು ಆತನು ಹೇಳಿದನು. ಆ ಕುರಿಮರಿಗೆ ಯಾವ ಕುಂದುಕೊರತೆಗಳು ಇರಬಾರದೆಂಬ ನಿಯಮವಿತ್ತು ಅನಂತರ ಅವರು ಅದರ ರಕ್ತವನ್ನು ಬಾಗಿಲಿನ ನಿಲವುಕಂಬಗಳಿಗೂ ಮತ್ತು ಮೇಲಿನಪಟ್ಟಿಗಳಿಗೂ ಹಚ್ಚಬೇಕಾಗಿತ್ತು. ದೇವರು ರಕ್ತವನ್ನು ನೋಡಿದಾಗ, ಆತನು ಅವರ ಮನೆಗಳನ್ನು ದಾಟಿಹೋದನು ಮತ್ತು ಅವರ ಚೊಚ್ಚಲ ಮಕ್ಕಳನ್ನು ಕೊಲ್ಲಲಿಲ್ಲ. ಈ ಆಚರಣೆಯನ್ನು ದೇವರು ಪಸ್ಕವೆಂದು ಕರೆದನು.
ಯೇಸು ಪಸ್ಕದ ಕುರಿಮರಿಯಂತಿರುವನು. ಆತನು ಎಂದೂ ಪಾಪ ಮಾಡಿರಲಿಲ್ಲ, ಆದ್ದರಿಂದ ಆತನಲ್ಲಿ ಯಾವ ತಪ್ಪು ಇರಲಿಲ್ಲ. ಆತನು ಪಸ್ಕ ಹಬ್ಬದ ಸಮಯದಲ್ಲಿ ಸತ್ತನು. ಒಬ್ಬನು ಯೇಸುವನ್ನು ನಂಬುವಾಗ, ಯೇಸುವಿನ ರಕ್ತವು ಆ ವ್ಯಕ್ತಿಯ ಪಾಪಕ್ಕಾಗಿ ಕ್ರಯವನ್ನು ಕಟ್ಟುತ್ತದೆ. ಇದು ದೇವರು ಆ ವ್ಯಕ್ತಿಯನ್ನು ದಾಟಿ ಹೋದಂತೆ ಇರುತ್ತದೆ, ಏಕೆಂದರೆ ಆತನು ಅವನನ್ನು ಶಿಕ್ಷಿಸುವುದಿಲ್ಲ.
ದೇವರು ಇಸ್ರಾಯೇಲ್ಯರೊಂದಿಗೆ ಒಡಂಬಡಿಕೆ ಮಾಡಿಕೊಂಡನು, ಯಾಕೆಂದರೆ ಆತನು ಅವರು ತನಗೆ ಸೇರಿದವರಾಗಿರಬೇಕೆಂದು ಆರಿಸಿಕೊಂಡ ಜನರಾಗಿದ್ದರು. ಆದರೆ ಈಗ ದೇವರು ಎಲ್ಲರಿಗೋಸ್ಕರವಾಗಿ ಹೊಸ ಒಡಂಬಡಿಕೆಯನ್ನು ಮಾಡಿದ್ದಾನೆ. ಯಾರೇ ಆಗಲಿ ಯಾವುದೇ ಜನಾಂಗದವನಾಗಲಿ ಈ ಹೊಸ ಒಡಂಬಡಿಕೆಯನ್ನು ಅಂಗೀಕರಿಸಿದರೆ, ಅವನು ದೇವರ ಜನರೊಂದಿಗೆ ಸೇರುತ್ತಾನೆ. ಅವನು ಯೇಸುವನ್ನು ನಂಬುವುದರಿಂದ ಆತನು ಇದನ್ನು ಮಾಡುತ್ತಾನೆ.
ಮೋಶೆಯು ದೇವರ ವಾಕ್ಯವನ್ನು ಮಹಾ ಶಕ್ತಿಯಿಂದ ಘೋಷಿಸಿದಂಥ ಪ್ರವಾದಿಯಾಗಿದ್ದಾನೆ. ಆದರೆ ಯೇಸು ಎಲ್ಲಾ ಪ್ರವಾದಿಗಳಿಗಿಂತಲೂ ಮಹಾ ಪ್ರವಾದಿಯಾಗಿದ್ದಾನೆ. ಆತನು ದೇವರಾಗಿದ್ದಾನೆ, ಆದ್ದರಿಂದ ಆತನು ಮಾಡಿದ್ದೆಲ್ಲವು ಮತ್ತು ಹೇಳಿದ್ದೆಲ್ಲವು ದೇವರ ಕ್ರಿಯೆಗಳು ಮತ್ತು ಮಾತುಗಳು ಆಗಿವೆ. ಆದ್ದರಿಂದಲೇ ಪವಿತ್ರಗ್ರಂಥವು ಯೇಸುವನ್ನು ದೇವರ ವಾಕ್ಯ ಎಂದು ಕರೆಯುತ್ತದೆ.
ದಾವೀದನ ಸಂತಾನದವರಲ್ಲಿ ಒಬ್ಬಾತನು ದೇವರ ಜನರ ಮೇಲೆ ಶಾಶ್ವತವಾಗಿ ಆಳುವನು ಎಂದು ದೇವರು ಆತನಿಗೆ ವಾಗ್ದಾನ ಮಾಡಿದ್ದನು. ಯೇಸು ದೇವರ ಮಗನು ಮತ್ತು ಮೆಸ್ಸೀಯನು ಆಗಿದ್ದಾನೆ, ಆದ್ದರಿಂದ ಆತನು ದಾವೀದನ ಸಂತಾನದವನಾಗಿದ್ದಾನೆ ಮತ್ತು ಆತನು ಶಾಶ್ವತವಾಗಿ ಆಳುತ್ತಾನೆ.
ದಾವೀದನು ಇಸ್ರಾಯೇಲರ ಅರಸನಾಗಿದ್ದನು, ಆದರೆ ಯೇಸು ಇಡೀ ವಿಶ್ವದ ಅರಸನಾಗಿದ್ದಾನೆ! ಆತನು ತಿರುಗಿ ಬಂದು ತನ್ನ ರಾಜ್ಯವನ್ನು ನೀತಿಯಿಂದಲೂ ಶಾಂತಿಯಿಂದಲೂ ಶಾಶ್ವತವಾಗಿ ಆಳುವನು.