unfoldingWord 25 - ಸೈತಾನನು ಯೇಸುವನ್ನು ಶೋಧಿಸಿದನು
เค้าโครง: Matthew 4:1-11; Mark 1:12-13; Luke 4:1-13
รหัสบทความ: 1225
ภาษา: Kannada
ผู้ฟัง: General
เป้าหมายของสื่อบันทึกเสียง: Evangelism; Teaching
Features: Bible Stories; Paraphrase Scripture
สถานะ: Approved
บทความเป็นแนวทางพื้นฐานสำหรับการแปลและบันทึกเสียงภาษาอื่นๆ ควรดัดแปลงตามความจำเป็นเพื่อให้เข้าใจและเหมาะสมกับวัฒนธรรมและภาษาแต่ละภาษา คำศัพท์และแนวคิดบางคำที่ใช้อาจต้องอธิบายเพิ่มเติม หรือแทนที่ หรือตัดออก
เนื้อหาบทความ
ಯೇಸು ದೀಕ್ಷಾಸ್ನಾನವನ್ನು ಮಾಡಿಸಿಕೊಂಡ ಕೂಡಲೇ, ಪವಿತ್ರಾತ್ಮನು ಆತನನ್ನು ಅಡವಿಗೆ ನಡೆಸಿದನು. ಯೇಸು ನಲವತ್ತು ದಿನ ಹಗಲಿರಳು ಅಲ್ಲಿದ್ದನು. ಆ ಸಮಯದಲ್ಲಿ ಆತನು ಉಪವಾಸ ಮಾಡಿದನು ಮತ್ತು ಸೈತಾನನು ಯೇಸುವಿನ ಬಳಿಗೆ ಬಂದು ಪಾಪಮಾಡುವಂತೆ ಆತನನ್ನು ಶೋಧಿಸಿದನು.
ಮೊದಲಿಗೆ, ಸೈತಾನನು ಯೇಸುವಿಗೆ, "ನೀನು ದೇವರ ಮಗನಾಗಿದ್ದರೆ, ಈ ಕಲ್ಲುಗಳನ್ನು ರೊಟ್ಟಿಯಾಗುವಂತೆ ಮಾಡಿ ನಿನ್ನ ಹಸಿವೆಯನ್ನು ನೀಗಿಸಿಕೋ " ಎಂದು ಹೇಳಿದನು.
ಆದರೆ ಯೇಸು ಸೈತಾನನಿಗೆ, ", ಜನರು ರೊಟ್ಟಿಯಿಂದ ಮಾತ್ರ ಬದುಕುವುದಿಲ್ಲ, ಆದರೆ ಅವರಿಗೆ ಬದುಕಲು ದೇವರು ಹೇಳುವಂಥ ಎಲ್ಲವು ಅಗತ್ಯವಾಗಿವೆ ಎಂದು ದೇವರ ವಾಕ್ಯದಲ್ಲಿ ಬರೆಯಲ್ಪಟ್ಟಿದೆ" ಎಂದು ಹೇಳಿದನು.
ಆಗ ಸೈತಾನನು ಯೇಸುವನ್ನು ದೇವಾಲಯದ ಗೋಪುರಕ್ಕೆ ಕರೆದುಕೊಂಡು ಹೋದನು. ಅವನು ಆತನಿಗೆ, “ನೀನು ದೇವರ ಮಗನಾಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು, ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
ಆದರೆ ಯೇಸು ಸೈತಾನನು ಮಾಡಬೇಕೆಂದು ತನ್ನನ್ನು ಕೇಳಿಕೊಂಡಿದ್ದನ್ನು ಮಾಡಲಿಲ್ಲ. ಬದಲಾಗಿ ಆತನು, "ದೇವರು ಎಲ್ಲರಿಗೂ ಹೇಳುವುದೇನಂದರೆ, ‘ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು'" ಎಂದು ಹೇಳಿದನು.
ಆಗ ಸೈತಾನನು ಯೇಸುವಿಗೆ ಲೋಕದ ಎಲ್ಲಾ ಸಾಮ್ರಾಜ್ಯಗಳನ್ನು ತೋರಿಸಿದನು. ಅವುಗಳು ಎಷ್ಟು ಶಕ್ತಿಶಾಲಿಯಾಗಿವೆ ಮತ್ತು ಎಷ್ಟು ಶ್ರೀಮಂತವಾಗಿವೆ ಎಂದು ಅವನು ಆತನಿಗೆ ತೋರಿಸಿದನು. ಅವನು ಯೇಸುವಿಗೆ, "ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು" ಎಂದು ಹೇಳಿದನು.
ಯೇಸು, "ಸೈತಾನನೇ ನನ್ನಿಂದ ತೊಲಗಿ ಹೋಗು!, ‘ನಿನ್ನ ದೇವರಾದ ಕರ್ತನನ್ನು ಮಾತ್ರ ಆರಾಧಿಸು, ಆತನನ್ನು ಮಾತ್ರವೇ ದೇವರೆಂದು ಗೌರವಿಸಬೇಕೆಂದು ದೇವರು ತನ್ನ ಜನರಿಗೆ ಅಜ್ಞಾಪಿಸಿದ್ದಾನೆ " ಎಂದು ಉತ್ತರಿಸಿದನು.
ಯೇಸು ಸೈತಾನನ ಶೋಧನೆಗೆ ಒಳಗಾಗಲಿಲ್ಲ, ಆದ್ದರಿಂದ ಸೈತಾನನು ಆತನನ್ನು ಬಿಟ್ಟು ಹೊರಟುಹೋದನು. ಅಗ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.