unfoldingWord 11 - ಪಸ್ಕ
เค้าโครง: Exodus 11:1-12:32
รหัสบทความ: 1211
ภาษา: Kannada
ผู้ฟัง: General
เป้าหมายของสื่อบันทึกเสียง: Evangelism; Teaching
Features: Bible Stories; Paraphrase Scripture
สถานะ: Approved
บทความเป็นแนวทางพื้นฐานสำหรับการแปลและบันทึกเสียงภาษาอื่นๆ ควรดัดแปลงตามความจำเป็นเพื่อให้เข้าใจและเหมาะสมกับวัฒนธรรมและภาษาแต่ละภาษา คำศัพท์และแนวคิดบางคำที่ใช้อาจต้องอธิบายเพิ่มเติม หรือแทนที่ หรือตัดออก
เนื้อหาบทความ
ಇಸ್ರಾಯೇಲ್ಯರನ್ನು ಬಿಟ್ಟುಬಿಡಬೇಕೆಂದು ಫರೋಹನಿಗೆ ತಿಳಿಸಲು ದೇವರು ಮೋಶೆ ಮತ್ತು ಆರೋನರನ್ನು ಕಳುಹಿಸಿದನು. ಅವನು ಅವರನ್ನು ಬಿಟ್ಟುಬಿಡದಿದ್ದರೆ ದೇವರು ಈಜಿಪ್ಟಿನ ಜನರ ಮತ್ತು ಪ್ರಾಣಿಗಳ ಚೊಚ್ಚಲಾದ ಗಂಡಾದವುಗಳನ್ನು ಕೊಲ್ಲುವೆನು ಎಂದು ಅವರು ಎಚ್ಚರಿಸಿದರು. ಫರೋಹನು ಇದನ್ನು ಕೇಳಿದಾಗ್ಯೂ ಅವನು ದೇವರನ್ನು ನಂಬಲು ಮತ್ತು ದೇವರಿಗೆ ವಿಧೇಯನಾಗಲು ನಿರಾಕರಿಸಿದನು.
ಅತನನ್ನು ನಂಬಿದವರ ಚೊಚ್ಚಲ ಮಗನನ್ನು ರಕ್ಷಿಸಲು ದೇವರು ಒಂದು ಮಾರ್ಗವನ್ನು ಒದಗಿಸಿಕೊಟ್ಟನು. ಪ್ರತಿಯೊಂದು ಕುಟುಂಬವೂ ಒಂದು ಪೂರ್ಣಾಂಗವಾದ ಕುರಿಮರಿಯನ್ನು ಆರಿಸಿಕೊಳ್ಳಬೇಕು ಮತ್ತು ಅದನ್ನು ವಧಿಸಬೇಕು ಎಂದು ಅವರಿಗೆ ತಿಳಿಸಲಾಯಿತು.
ಈ ಕುರಿಮರಿಯ ರಕ್ತವನ್ನು ಅವರ ಮನೆಗಳ ಬಾಗಿಲ ಸುತ್ತ ಹಚ್ಚಬೇಕು ಎಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು. ಅವರು ಮಾಂಸವನ್ನು ಸುಟ್ಟು, ತಕ್ಷಣವೇ ಅದನ್ನು ಅವರು ಹುಳಿಯಿಲ್ಲದ ರೊಟ್ಟಿಯೊಡನೆ ತಿನ್ನಬೇಕು. ಅವರು ಈ ಊಟವನ್ನು ತಿಂದ ತಕ್ಷಣವೇ ಈಜಿಪ್ಟನ್ನು ಬಿಟ್ಟು ಹೊರಡಲು ಸಿದ್ಧವಾಗಬೇಕೆಂದು ಸಹ ಆತನು ಹೇಳಿದನು.
ದೇವರು ಇಸ್ರಾಯೇಲ್ಯರಿಗೆ ಏನು ಮಾಡಬೇಕೆಂದು ಆಜ್ಞಾಪಿಸಿದ್ದನೋ ಅವರು ಎಲ್ಲವನ್ನೂ ಮಾಡಿದರು. ಮಧ್ಯರಾತ್ರಿಯಲ್ಲಿ, ದೇವರು ಈಜಿಪ್ಟಿನ ನಡುವೆ ಹಾದುಹೋಗುತ್ತಾ ಪ್ರತಿಯೊಬ್ಬ ಚೊಚ್ಚಲ ಮಗನನ್ನು ಸಂಹರಿಸತೊಡಗಿದನು.
ಇಸ್ರಾಯೇಲ್ಯರ ಎಲ್ಲಾ ಮನೆಗಳು ಬಾಗಿಲು ಸುತ್ತಲೂ ರಕ್ತವನ್ನು ಹಚ್ಚಿದ್ದರು, ಆದ್ದರಿಂದ ದೇವರು ಆ ಮನೆಗಳನ್ನು ದಾಟಿಹೋದನು. ಅವುಗಳೊಳಗೆ ಇದ್ದವರೆಲ್ಲರು ಸುರಕ್ಷಿತರಾಗಿದ್ದರು. ಕುರಿಮರಿಯ ರಕ್ತದ ನಿಮಿತ್ತ ಅವರು ಸಂರಕ್ಷಿಸಲ್ಪಟ್ಟರು.
ಆದರೆ ಈಜಿಪ್ತಿಯನ್ನರು ದೇವರನ್ನು ನಂಬಲಿಲ್ಲ ಅಥವಾ ಆತನ ಆಜ್ಞೆಗಳನ್ನು ಅನುಸರಿಸಲಿಲ್ಲ. ಆದ್ದರಿಂದ ದೇವರು ಅವರ ಮನೆಗಳನ್ನು ದಾಟಿಹೋಗಲಿಲ್ಲ. ದೇವರು ಈಜಿಪ್ಟಿನವರ ಚೊಚ್ಚಲ ಮಕ್ಕಳಲ್ಲಿ ಪ್ರತಿಯೊಬ್ಬನನ್ನು ಸಂಹರಿಸಿದನು.
ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಈಜಿಪ್ತಿಯನ್ನರ ಎಲ್ಲಾ ಚೊಚ್ಚಲ ಗಂಡುಮಕ್ಕಳು ಸತ್ತುಹೋದರು. ಈಜಿಪ್ಟಿನಲ್ಲಿ ಬಹಳ ಜನರು ಗಾಢವಾದ ದುಃಖದಿಂದ ಅಳುತ್ತಿದ್ದರು ಮತ್ತು ಗೋಳಾಡುತ್ತಿದ್ದರು.
ಅದೇ ರಾತ್ರಿಯಲ್ಲಿ ಫರೋಹನು ಮೋಶೆ ಆರೋನರನ್ನು ಕರೆಯಿಸಿ, "ಇಸ್ರಾಯೇಲ್ಯರನ್ನು ಕರೆದುಕೊಂಡು ತಕ್ಷಣವೇ ಈಜಿಪ್ಟನ್ನು ಬಿಟ್ಟುಹೋಗಿರಿ!" ಎಂದು ಹೇಳಿದನು. ಈಜಿಪ್ಟಿನ ಜನರು ಸಹ ಇಸ್ರಾಯೇಲ್ಯರನ್ನು ತಕ್ಷಣವೇ ಹೊರಟುಹೋಗುವಂತೆ ಬಲವಂತಮಾಡಿದರು.