unfoldingWord 06 - ದೇವರು ಇಸಾಕನಿಗಾಗಿ ಹೆಂಡತಿಯನ್ನು ಒದಗಿಸಿಕೊಟ್ಟದ್ದು
เค้าโครง: Genesis 24:1-25:26
รหัสบทความ: 1206
ภาษา: Kannada
ผู้ฟัง: General
เป้าหมายของสื่อบันทึกเสียง: Evangelism; Teaching
Features: Bible Stories; Paraphrase Scripture
สถานะ: Approved
บทความเป็นแนวทางพื้นฐานสำหรับการแปลและบันทึกเสียงภาษาอื่นๆ ควรดัดแปลงตามความจำเป็นเพื่อให้เข้าใจและเหมาะสมกับวัฒนธรรมและภาษาแต่ละภาษา คำศัพท์และแนวคิดบางคำที่ใช้อาจต้องอธิบายเพิ่มเติม หรือแทนที่ หรือตัดออก
เนื้อหาบทความ
ಅಬ್ರಹಾಮನು ಬಹಳ ವೃದ್ಧನಾಗಿದ್ದಾಗ, ಅವನ ಮಗನಾದ ಇಸಾಕನು ಪ್ರಾಯದವನಾಗಿ ಬೆಳೆದನು. ಅಬ್ರಹಾಮನು ತನ್ನ ಸೇವಕರಲ್ಲಿ ಒಬ್ಬನನ್ನು ತನ್ನ ಮಗನಾದ ಇಸಾಕನಿಗೆ ಹೆಂಡತಿಯನ್ನ ಹುಡುಕಿ ಕರೆತರಲು ಅವನ ಬಂಧುಗಳು ವಾಸಿಸುತ್ತಿದ್ದ ದೇಶಕ್ಕೆ ಕಳುಹಿಸಿದನು.
ಅಬ್ರಹಾಮನ ಬಂಧುಗಳು ವಾಸಿಸುತ್ತಿದ್ದ ದೇಶಕ್ಕೆ ದೀರ್ಘಕಾಲ ಪ್ರಯಾಣ ಮಾಡಿದ ನಂತರ ದೇವರು ಆ ಸೇವಕನನ್ನು ರೆಬೆಕ್ಕಳ ಬಳಿಗೆ ನಡೆಸಿದನು. ಅವಳು ಅಬ್ರಹಾಮನ ಸಹೋದರನ ಮೊಮ್ಮಗಳು.
ರೆಬೆಕ್ಕಳು ತನ್ನ ಕುಟುಂಬವನ್ನು ಬಿಟ್ಟು ಸೇವಕನೊಂದಿಗೆ ಇಸಾಕನ ಮನೆಗೆ ಹೋಗಲು ಒಪ್ಪಿಕೊಂಡಳು. ಅವಳು ಬಂದ ಕೂಡಲೇ ಇಸಾಕನು ಅವಳನ್ನು ಮದುವೆಯಾದನು.
ಬಹಳ ಸಮಯದ ನಂತರ, ಅಬ್ರಹಾಮನು ಸತ್ತುಹೋದನು. ಅಬ್ರಹಾಮನೊಂದಿಗೆ ಮಾಡಿಕೊಂಡಿದ ಒಡಂಬಡಿಕೆಯ ನಿಮಿತ್ತ ದೇವರು ಅಬ್ರಹಾಮನ ಮಗನಾದ ಇಸಾಕನನ್ನು ಆಶೀರ್ವದಿಸಿದನು. ಆ ಒಡಂಬಡಿಕೆಯಲ್ಲಿರುವ ದೇವರ ವಾಗ್ದಾನಗಳಲ್ಲಿ ಒಂದು ಅಬ್ರಹಾಮನು ಅಸಂಖ್ಯಾತವಾದ ಸಂತತಿಯನ್ನು ಹೊಂದುವನು ಎಂಬುದಾಗಿದೆ. ಆದರೆ ಇಸಾಕನ ಹೆಂಡತಿಯಾದ ರೆಬೆಕ್ಕಳಿಗೆ ಮಕ್ಕಳಿರಲಿಲ್ಲ.
ಇಸಾಕನು ರೆಬೆಕ್ಕಳಿಗಾಗಿ ಪ್ರಾರ್ಥಿಸಿದನು, ಮತ್ತು ಅವಳು ಅವಳಿ ಮಕ್ಕಳಿಗೆ ಗರ್ಭವತಿಯಾಗುವಂತೆ ದೇವರು ಅವಳಿಗೆ ಅವಕಾಶ ಮಾಡಿಕೊಟ್ಟನು. ರೆಬೆಕ್ಕಳ ಗರ್ಭದಲ್ಲಿರುವಾಗಲೇ ಎರಡು ಶಿಶುಗಳು ಪರಸ್ಪರ ಒಂದನ್ನೊಂದು ನೂಕಾಡುತ್ತಿದ್ದವು, ಆದ್ದರಿಂದ ರೆಬೆಕ್ಕಳು ಏನು ನಡೆಯುತ್ತಿದೆ ಎಂದು ದೇವರನ್ನು ವಿಚಾರಿಸಿದಳು.
ದೇವರು ರೆಬೆಕ್ಕಳಿಗೆ, "ನೀನು ಇಬ್ಬರು ಗಂಡುಮಕ್ಕಳಿಗೆ ಜನ್ಮ ನೀಡುವಿ. ಅವರ ವಂಶಸ್ಥರು ಎರಡು ವಿಭಿನ್ನ ಜನಾಂಗಗಳಾಗುತ್ತಾರೆ. ಅವರು ಪರಸ್ಪರ ಒಬ್ಬರೊಂದಿಗೊಬ್ಬರು ಹೋರಾಡುವರು. ಆದರೆ ನಿನ್ನ ಹಿರಿಯ ಮಗನಿಂದ ಬರುವ ಜನಾಂಗವು ನಿನ್ನ ಕಿರಿಯ ಮಗನಿಂದ ಬರುವ ಜನಾಂಗಕ್ಕೆ ಅಧೀನವಾಗಿರುತ್ತದೆ" ಎಂದು ಹೇಳಿದನು.
ರೆಬೆಕ್ಕಳ ಶಿಶುಗಳು ಜನಿಸಿದಾಗ, ಹಿರಿಯ ಮಗನು ಕೆಂಪಾಗಿಯೂ ಮತ್ತು ರೋಮವುಳ್ಳವನಾಗಿಯೂ ಹೊರಗೆ ಬಂದನು, ಮತ್ತು ಅವರು ಅವನಿಗೆ ಏಸಾವ ಎಂದು ಹೆಸರಿಟ್ಟರು. ಅನಂತರ ಕಿರಿಯ ಮಗನು ಏಸಾವನ ಹಿಮ್ಮಡಿಯನ್ನು ಹಿಡಿದುಕೊಂಡು ಹೊರಬಂದನು ಮತ್ತು ಅವರು ಅವನಿಗೆ ಯಾಕೋಬ ಎಂದು ಹೆಸರಿಟ್ಟರು.