unfoldingWord 21 - ದೇವರು ಮೆಸ್ಸೀಯನನ್ನು ಕಳುಹಿಸುವೆನೆಂದು ಮಾಡಿದ ವಾಗ್ದಾನ
รหัสบทความ: 1221
ภาษา: Kannada
ผู้ฟัง: General
เป้าหมายของสื่อบันทึกเสียง: Evangelism; Teaching
Features: Bible Stories; Paraphrase Scripture
สถานะ: Approved
บทความเป็นแนวทางพื้นฐานสำหรับการแปลและบันทึกเสียงภาษาอื่นๆ ควรดัดแปลงตามความจำเป็นเพื่อให้เข้าใจและเหมาะสมกับวัฒนธรรมและภาษาแต่ละภาษา คำศัพท์และแนวคิดบางคำที่ใช้อาจต้องอธิบายเพิ่มเติม หรือแทนที่ หรือตัดออก
เนื้อหาบทความ
ದೇವರು ತಾನು ಲೋಕವನ್ನು ಸೃಷ್ಟಿಸಿದಾಗಲೇ, ಸ್ವಲ್ಪ ಕಾಲದ ತರುವಾಯ ತಾನು ಮೆಸ್ಸೀಯನನ್ನು ಲೋಕಕ್ಕೆ ಕಳುಹಿಸುವೆನು ಎಂದು ಆತನಿಗೆ ತಿಳಿದಿತ್ತು. ಆತನು ಇದನ್ನು ಮಾಡುವೆನೆಂದು ಆದಾಮ ಹವ್ವರಿಗೆ ವಾಗ್ದಾನ ಮಾಡಿದ್ದನು. ಹವ್ವಳ ಸಂತಾನದವನು ಹುಟ್ಟುವವನು ಸರ್ಪದ ತಲೆಯನ್ನು ಜಜ್ಜುವನು ಎಂದು ಆತನು ಮೊದಲೇ ತಿಳಿಸಿದ್ದನು . ಹವ್ವಳನ್ನು ವಂಚಿಸಿದ ಸರ್ಪವು ಖಂಡಿತವಾಗಿಯೂ ಸೈತಾನನೇ ಆಗಿದ್ದಾನೆ. ಮೆಸ್ಸೀಯನು ಸೈತಾನನನ್ನು ಸಂಪೂರ್ಣವಾಗಿ ಸೋಲಿಸುವನೆಂದು ದೇವರು ಯೋಜಿಸಿದನು.
ಅಬ್ರಹಾಮನ ಮೂಲಕ ಲೋಕದ ಎಲ್ಲಾ ಜನಾಂಗಗಳು ಆಶೀರ್ವಾದವನ್ನು ಹೊಂದಿಕೊಳ್ಳುವವು ಎಂದು ದೇವರು ಅವನಿಗೆ ವಾಗ್ದಾನ ಮಾಡಿದನು. ಸ್ವಲ್ಪ ಕಾಲವಾದ ಮೇಲೆ ಮೆಸ್ಸೀಯನನ್ನು ಕಳುಹಿಸುವ ಮೂಲಕ ದೇವರು ಈ ವಾಗ್ದಾನವನ್ನು ನೆರವೇರಿಸುವುದಾಗಿ ತಿಳಿದಿದ್ದನು. ಮೆಸ್ಸೀಯನು ಲೋಕದಲ್ಲಿರುವ ಎಲ್ಲಾ ಜನಾಂಗಗಳ ಜನರನ್ನು ಅವರ ಪಾಪದಿಂದ ಬಿಡಿಸಿ ರಕ್ಷಿಸುವನು.
ಭವಿಷ್ಯದಲ್ಲಿ ಮೋಶೆಯಂತಹ ಮತ್ತೊಬ್ಬ ಪ್ರವಾದಿಯನ್ನು ತಾನು ಕಳುಹಿಸುವುದಾಗಿ ದೇವರು ಮೋಶೆಗೆ ವಾಗ್ದಾನ ಮಾಡಿದನು. ಈ ಪ್ರವಾದಿಯು ಮೆಸ್ಸೀಯನಾಗಿದ್ದಾನೆ. ಮೆಸ್ಸೀಯನನ್ನು ಕಳುಹಿಸುವೆನು ಎಂದು ದೇವರು ಈ ರೀತಿಯಲ್ಲಿ ವಾಗ್ದಾನ ಮಾಡಿದನು.
ದೇವರು ಅರಸನಾದ ದಾವೀದನಿಗೆ ಅವನ ಸ್ವಂತ ಸಂತತಿಯವರಲ್ಲಿ ಒಬ್ಬನು ಮೆಸ್ಸೀಯನಾಗುವನು ಎಂದು ವಾಗ್ದಾನ ಮಾಡಿದನು. ಆತನು ಅರಸನಾಗಿರುವನು ಮತ್ತು ದೇವರ ಜನರನ್ನು ಶಾಶ್ವತವಾಗಿ ಆಳುವನು.
ದೇವರು ಪ್ರವಾದಿಯಾದ ಯೆರೆಮೀಯನೊಂದಿಗೆ ಮಾತನಾಡಿ, ತಾನು ಅವನೊಂದಿಗೆ ಒಂದು ದಿನ ಹೊಸ ಒಡಂಬಡಿಕೆಯನ್ನು ಸ್ಥಾಪಿಸುವುದಾಗಿ ಹೇಳಿದನು. ಈ ಹೊಸ ಒಡಂಬಡಿಕೆಯು ಸಿನಾಯಿ ಬೆಟ್ಟದಲ್ಲಿ ಇಸ್ರಾಯೇಲರೊಂದಿಗೆ ಮಾಡಿಕೊಂಡಂಥ ಹಳೆಯ ಒಡಂಬಡಿಕೆಯಂತದಲ್ಲ . ಆತನು ಜನರೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವಾಗ, ಅವರು ತನ್ನನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವಂತೆ ಆತನು ಮಾಡುವನು. ಪ್ರತಿಯೊಬ್ಬ ವ್ಯಕ್ತಿಯು ಆತನನ್ನು ಪ್ರೀತಿಸಲು ಮತ್ತು ಆತನ ನಿಯಮಗಳಿಗೆ ವಿಧೇಯನಾಗಲು ಬಯಸುವನು. ಇದು ದೇವರು ಅವರ ಹೃದಯಗಳಲ್ಲಿ ನಿಯಮವನ್ನು ಬರೆಯುವ ರೀತಿಯಲ್ಲಿರುವುದು ಎಂದು ಆತನು ಹೇಳಿದನು. ಅವರು ಆತನ ಜನರಾಗಿರುವರು ಮತ್ತು ದೇವರು ಅವರ ಪಾಪಗಳನ್ನು ಕ್ಷಮಿಸುವನು. ಅವರೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವವನು. ಅ ಮೆಸ್ಸಿಯನೇ
ಬರಲಿರುವ ಮೆಸ್ಸೀಯನು ಒಬ್ಬ ಪ್ರವಾದಿಯು, ಯಾಜಕನು, ಮತ್ತು ಅರಸನು ಆಗಿರುವನು ಎಂದು ದೇವರ ಪ್ರವಾದಿಗಳು ಹೇಳಿದ್ದಾರೆ. ಪ್ರವಾದಿಯು ದೇವರ ಮಾತುಗಳನ್ನು ಕೇಳಿಸಿಕೊಂಡು ನಂತರ ದೇವರ ಸಂದೇಶಗಳನ್ನು ಜನರಿಗೆ ಪ್ರಕಟಿಸುವಂಥ ವ್ಯಕ್ತಿಯಾಗಿರುತ್ತಾನೆ. ದೇವರು ತಾನು ಕಳುಹಿಸುವೆನೆಂದು ವಾಗ್ದಾನ ಮಾಡಿದಂಥ ಮೆಸ್ಸೀಯನು ಪರಿಪೂರ್ಣನಾದ ಪ್ರವಾದಿಯಾಗಿರುವನು. ಅಂದರೆ ಮೆಸ್ಸೀಯನು ದೇವರ ಸಂದೇಶಗಳನ್ನು ಪರಿಪೂರ್ಣವಾಗಿ ಕೇಳಿಸಿಕೊಳ್ಳುವನು, ಆತನು ಅವುಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವನು, ಮತ್ತು ಆತನು ಜನರಿಗೆ ಪರಿಪೂರ್ಣವಾಗಿ ಬೋಧಿಸುವನು.
ಇಸ್ರಾಯೇಲ್ಯರ ಯಾಜಕರು ಜನರಿಗಾಗಿ ದೇವರಿಗೆ ಯಜ್ಞಗಳನ್ನು ಅರ್ಪಿಸುತ್ತಾ ಇದ್ದರು. ಈ ಯಜ್ಞಗಳು ದೇವರು ಜನರನ್ನು ಅವರ ಪಾಪಗಳಿಗಾಗಿ ಶಿಕ್ಷಿಸುವುದಕ್ಕೆ ಬದಲಾಗಿದ್ದಂಥವುಗಳು ಆಗಿದ್ದವು. ಯಾಜಕರು ಜನರಿಗಾಗಿ ದೇವರ ಬಳಿಯಲ್ಲಿ ಪ್ರಾರ್ಥಿಸುತ್ತಿದ್ದರು. ಆದರೂ, ಮೆಸ್ಸೀಯನೇ ಪರಿಪೂರ್ಣನಾದ ಮಹಾಯಾಜಕನಾಗಿದ್ದನು, ಏಕೆಂದರೆ ಆತನು ತನ್ನನ್ನೇ ದೇವರಿಗೆ ಪರಿಪೂರ್ಣವಾದ ಯಜ್ಞವಾಗಿ ಸಮರ್ಪಿಸುವನು. ಅಂದರೆ ಆತನು ಎಂದಿಗೂ ಪಾಪಮಾಡುವುದಿಲ್ಲ ಮತ್ತು ಆತನು ಸ್ವತಃ ತನ್ನನ್ನೇ ಯಜ್ಞವಾಗಿ ಒಪ್ಪಿಸಿಕೊಡುವಾಗ, ಪಾಪ ಪರಿಹಾರಕ್ಕಾಗಿ ಬೇರೆ ಯಾವುದೇ ಯಜ್ಞದ ಅಗತ್ಯವಿರುವುದಿಲ್ಲ.
ಅರಸರು ಮತ್ತು ಮುಖಂಡರು ಜನಾಂಗಗಳನ್ನು ಆಳುತ್ತಾರೆ, ಆದರೆ ಅವರು ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಾರೆ. ಅರಸನಾದ ದಾವೀದನು ಇಸ್ರಾಯೇಲ್ಯರನ್ನು ಮಾತ್ರ ಆಳಿದನು. ಆದರೆ ದಾವೀದನ ಸಂತತಿಯವನಾದ ಮೆಸ್ಸೀಯನು ಇಡೀ ಲೋಕವನ್ನು ಆಳುತ್ತಾನೆ ಮತ್ತು ಅವನು ಶಾಶ್ವತವಾಗಿ ಆಳುವನು. ಅಷ್ಟು ಮಾತ್ರವಲ್ಲದೆ ಆತನು ಯಾವಾಗಲೂ ನ್ಯಾಯಯುತವಾಗಿ ಆಳುವನು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವನು.
ದೇವರ ಪ್ರವಾದಿಗಳು ಮೆಸ್ಸೀಯನ ಕುರಿತು ಇನ್ನೂ ಅನೇಕ ವಿಷಯಗಳನ್ನು ಹೇಳಿದರು. ಉದಾಹರಣೆಗೆ, ಮೆಸ್ಸೀಯನು ಬರುವುದಕ್ಕಿಂತ ಮೊದಲು ಇನ್ನೊಬ್ಬ ಪ್ರವಾದಿಯು ಬರುವನೆಂದು ಪ್ರವಾದಿಯಾದ ಮಲಾಕಿಯನು ಹೇಳಿದ್ದಾನೆ. ಆ ಪ್ರವಾದಿಯು ಅತ್ಯಂತ ಪ್ರಾಮುಖ್ಯವಾದವನಾಗಿರುವನು. ಪ್ರವಾದಿಯಾದ ಯೆಶಾಯನು, ಮೆಸ್ಸೀಯನು ಕನ್ನಿಕೆಯಲ್ಲಿ ಜನಿಸುತ್ತಾನೆ ಎಂದು ಬರೆದನು. ಮೆಸ್ಸೀಯನು ಬೇತ್ಲೆಹೇಮ್ ಎಂಬ ಊರಿನಲ್ಲಿ ಜನಿಸುತ್ತಾನೆ ಎಂದು ಪ್ರವಾದಿಯಾದ ಮೀಕನು ಹೇಳಿದನು.
ಮೆಸ್ಸೀಯನು ಗಲಿಲಾಯ ಸೀಮೆಯಲ್ಲಿ ವಾಸಿಸುವನು ಎಂದು ಪ್ರವಾದಿಯಾದ ಯೆಶಾಯನು ಹೇಳಿದನು. ಮೆಸ್ಸೀಯನು ತುಂಬಾ ದುಃಖಿತರಾಗಿರುವ ಜನರನ್ನು ಸಂತೈಸುವನು. ಆತನು ಸೆರೆಯಲ್ಲಿರುವವರನ್ನು ಬಿಡುಗಡೆಮಾಡುವನು. ಕೇಳಲು, ನೋಡಲು, ಮಾತನಾಡಲು, ಅಥವಾ ನಡೆಯಲು ಆಗದಂಥ ರೋಗಿಗಳನ್ನು ಸಹ ಮೆಸ್ಸೀಯನು ಗುಣಪಡಿಸುವನು.
ಜನರು ಮೆಸ್ಸೀಯನನ್ನು ದ್ವೇಷಿಸುತ್ತಾರೆ ಮತ್ತು ಆತನನ್ನು ಅಂಗೀಕರಿಸಿಕೊಳ್ಳಲು ನಿರಾಕರಿಸುತ್ತಾರೆ ಎಂದು ಪ್ರವಾದಿಯಾದ ಯೆಶಾಯನು ಹೇಳಿದನು. ಮೆಸ್ಸೀಯನ ಸ್ನೇಹಿತನು ಆತನಿಗೆ ದ್ರೋಹಮಾಡುವನು ಎಂದು ಇತರ ಪ್ರವಾದಿಗಳು ಹೇಳಿದರು. ಈ ಸ್ನೇಹಿತನು ಇದನ್ನು ಮಾಡುವುದಕ್ಕಾಗಿ ಬೇರೆ ಜನರಿಂದ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಳ್ಳುತ್ತಾನೆಂದು ಪ್ರವಾದಿಯಾದ ಜೆಕರ್ಯನು ಹೇಳಿದನು. ಜನರು ಮೆಸ್ಸೀಯನನ್ನು ಕೊಲ್ಲುತ್ತಾರೆ ಮತ್ತು ಅವರು ಆತನ ಬಟ್ಟೆಗಾಗಿ ಚೀಟು ಹಾಕುತ್ತಾರೆ ಎಂದು ಕೆಲವು ಪ್ರವಾದಿಗಳು ಎಂದು ಹೇಳಿದ್ದಾರೆ.
ಮೆಸ್ಸೀಯನು ಹೇಗೆ ಸಾಯುತ್ತಾನೆ ಎಂಬುದರ ಕುರಿತು ಪ್ರವಾದಿಗಳು ಹೇಳಿದ್ದಾರೆ. ಜನರು ಮೆಸ್ಸೀಯನಿಗೆ ಉಗುಳುವರು, ಅಪಹಾಸ್ಯ ಮಾಡುವರು ಮತ್ತು ಹೊಡೆಯುವರು ಎಂದು ಯೆಶಾಯನು ಪ್ರವಾದಿಸಿದನು. ಆತನು ಯಾವ ತಪ್ಪನ್ನು ಮಾಡದಿದ್ದರೂ ಸಹ ಅವರು ಆತನನ್ನು ತಿವಿಯುವರು ಮತ್ತು ಆತನು ಅತಿ ಸಂಕಟದಿಂದ ಮತ್ತು ಯಾತನೆಯಿಂದ ಸಾಯುವನು ಎಂದು ಪ್ರವಾದಿಗಳು ತಿಳಿಸಿದರು .
ಮೆಸ್ಸೀಯನು ಪಾಪಮಾಡುವುದಿಲ್ಲ ಎಂದು ಸಹ ಪ್ರವಾದಿಗಳು ಹೇಳಿದ್ದಾರೆ. ಆತನು ಪರಿಪೂರ್ಣನಾಗಿರುವನು. ಆದರೆ ಆತನು ಸಾಯುವನು ಏಕೆಂದರೆ ದೇವರು ಇತರ ಜನರ ಪಾಪಗಳಿಗಾಗಿ ಆತನನ್ನು ಶಿಕ್ಷಿಸುವನು. ಆತನು ಸತ್ತಾಗ ಜನರು ದೇವರೊಂದಿಗೆ ಸಮಾಧಾನವುಳ್ಳವರಾಗಿರಲು ಸಾಧ್ಯವಾಗುತ್ತದೆ. ಅದಕಾರಣವೇ ದೇವರು ಮೆಸ್ಸೀಯನನ್ನು ಮರಣಕ್ಕೊಳ್ಳಗಾಗುವಂತೆ ಮಾಡಲು ಇಚ್ಛಿಸಿದನು.
ದೇವರು ಸತ್ತವರೊಳಗಿಂದ ಮೆಸ್ಸೀಯನನ್ನು ಎಬ್ಬಿಸುವನೆಂದು ಸಹ ಪ್ರವಾದಿಗಳು ಹೇಳಿದ್ದಾರೆ. ಇವೆಲ್ಲವು ಹೊಸ ಒಡಂಬಡಿಕೆಯನ್ನು ಮಾಡುವುದಕ್ಕಿರುವಂಥ ದೇವರ ಸಂಕಲ್ಪವಾಗಿದೆ ಎಂದು ಇದು ತೋರಿಸುತ್ತದೆ, ಆದ್ದರಿಂದ ಆತನು ತನಗೆ ವಿರುದ್ಧವಾಗಿ ಪಾಪ ಮಾಡಿದ ಜನರನ್ನು ರಕ್ಷಿಸಬಲ್ಲನು.
ದೇವರು ಮೆಸ್ಸೀಯನ ಕುರಿತು ಅನೇಕ ವಿಷಯಗಳನ್ನು ತನ್ನ ಪ್ರವಾದಿಗಳಿಗೆ ಪ್ರಕಟಪಡಿಸಿದನು, ಆದರೆ ಆ ಪ್ರವಾದಿಗಳ ಒಬ್ಬರ ಕಾಲದಲ್ಲಿಯೂ ಮೆಸ್ಸೀಯನು ಬರಲಿಲ್ಲ. ಈ ಪ್ರವಾದನೆಗಳಲ್ಲಿ ಕೊನೆಯದಾಗಿ ನುಡಿಯಲ್ಪಟ್ಟಂಥ ಪ್ರವಾದನೆಯ 400 ವರ್ಷಗಳ ನಂತರ, ನಿಗದಿಯಾದ ಸರಿಯಾದ ಸಮಯದಲ್ಲಿ, ದೇವರು ಮೆಸ್ಸೀಯನನ್ನು ಲೋಕಕ್ಕೆ ಕಳುಹಿಸುವನು.