unfoldingWord 22 - ಯೋಹಾನನ ಜನನ
ໂຄງຮ່າງ: Luke 1
ໝາຍເລກສະຄຣິບ: 1222
ພາສາ: Kannada
ຜູ້ຊົມ: General
ຈຸດປະສົງ: Evangelism; Teaching
Features: Bible Stories; Paraphrase Scripture
ສະຖານະ: Approved
ສະຄຣິບເປັນຂໍ້ແນະນຳພື້ນຖານສຳລັບການແປ ແລະການບັນທຶກເປັນພາສາອື່ນ. ພວກມັນຄວນຈະຖືກດັດແປງຕາມຄວາມຈໍາເປັນເພື່ອເຮັດໃຫ້ພວກເຂົາເຂົ້າໃຈໄດ້ແລະມີຄວາມກ່ຽວຂ້ອງສໍາລັບແຕ່ລະວັດທະນະທໍາແລະພາສາທີ່ແຕກຕ່າງກັນ. ບາງຂໍ້ກໍານົດແລະແນວຄວາມຄິດທີ່ໃຊ້ອາດຈະຕ້ອງການຄໍາອະທິບາຍເພີ່ມເຕີມຫຼືແມ້ກະທັ້ງຖືກປ່ຽນແທນຫຼືຖືກລະເວັ້ນຫມົດ.
ຂໍ້ຄວາມສະຄຣິບ
ಹಿಂದಿನ ಕಾಲದಲ್ಲಿ, ದೇವರು ತನ್ನ ಪ್ರವಾದಿಗಳೊಂದಿಗೆ ಮಾತನಾಡುತ್ತಿದ್ದನು, ಅವರು ಆತನ ಜನರಿಗೆ ಅದನ್ನು ನುಡಿಯುತ್ತಿದ್ದರು. ಅನಂತರ 400 ವರ್ಷಗಳ ಉರುಳಿಹೋದವು ಆದರೆ ಆ ಸಮಯದಲ್ಲಿ ಆತನು ಅವರೊಂದಿಗೆ ಮಾತನಾಡಲಿಲ್ಲ. ಆಗ ದೇವರು ಜಕರೀಯನೆಂಬ ಯಾಜಕನ ಬಳಿಗೆ ದೂತನನ್ನು ಕಳುಹಿಸಿದನು. ಜಕರೀಯನು ಮತ್ತು ಅವನ ಹೆಂಡತಿಯಾದ ಎಲಿಸಬೇತಳು ದೇವರನ್ನು ಗೌರವಿಸುತ್ತಿದ್ದರು. ಅವರು ತುಂಬಾ ವೃದ್ಧರಾಗಿದ್ದರು ಮತ್ತು ಅವಳಿಗೆ ಮಕ್ಕಳಿರಲಿಲ್ಲ.
ದೇವದೂತನು ಜಕರೀಯನಿಗೆ, "ನಿನ್ನ ಹೆಂಡತಿಯು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು. ದೇವರು ಅವನನ್ನು ಪವಿತ್ರಾತ್ಮನಿಂದ ತುಂಬಿಸುವನು, ಮತ್ತು ಮೆಸ್ಸೀಯನನ್ನು ಸ್ವೀಕರಿಸಿಕೊಳ್ಳಲು ಜನರನ್ನು ಯೋಹಾನನು ಸಿದ್ಧಪಡಿಸುವನು!" ಎಂದು ಹೇಳಿದನು. ಜೆಕರೀಯನು, "ನಾನು ಮತ್ತು ನನ್ನ ಹೆಂಡತಿಯು ತುಂಬಾ ವೃದ್ಧರಾಗಿದ್ದೇವೆ, ಮಕ್ಕಳನ್ನು ಪಡೆಯಲು ನಮ್ಮಿಂದ ಆಗುವುದಿಲ್ಲ! ನೀನು ನನಗೆ ಹೇಳುತ್ತಿರುವುದು ಸತ್ಯವೆಂದು ತಿಳಿದುಕೊಳ್ಳುವುದಾದರೂ ಹೇಗೆ?" ಎಂದು ಪ್ರತ್ಯುತ್ತರವನ್ನು ಕೊಟ್ಟನು.
ದೇವದೂತನು ಜಕರೀಯನಿಗೆ, "ಈ ಶುಭವಾರ್ತೆಯನ್ನು ನಿನಗೆ ತಿಳಿಸುವುದಕ್ಕಾಗಿ ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ. ನೀನು ನನ್ನನ್ನು ನಂಬದೆಹೋದುದರಿಂದ ಮಗು ಹುಟ್ಟುವವರೆಗೂ ನೀನು ಮಾತನಾಡಲಾರದೆ ಇರುವಿ" ಎಂದು ಉತ್ತರಕೊಟ್ಟನು. ಕೂಡಲೇ ಜಕರೀಯನಿಗೆ ಮಾತನಾಡಲು ಆಗದೆಹೋಯಿತು. ಆಗ ಆ ದೂತನು ಜಕರೀಯನನ್ನು ಬಿಟ್ಟುಹೋದನು. ಇದಾದನಂತರ ಜಕರೀಯನು ಮನೆಗೆ ಹಿಂದಿರುಗಿ ಬಂದನು ಮತ್ತು ಅವನ ಹೆಂಡತಿಯು ಗರ್ಭಿಣಿಯಾದಳು.
ಎಲಿಸಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ಅದೇ ದೇವದೂತನು ಎಲಿಸಬೇತಳ ಬಂಧುವಿಗೆ ಪ್ರತ್ಯಕ್ಷನಾದನು, ಆಕೆಯ ಹೆಸರು ಮರಿಯಳು. ಅವಳು ಕನ್ನಿಕೆಯಾಗಿದ್ದಳು ಮತ್ತು ಆಕೆಗೆ ಯೋಸೇಫನೆಂಬ ಪುರುಷನೊಂದಿಗೆ ಮದುವೆಯಾಗಲು ನಿಶ್ಚಿತಾರ್ಥವಾಗಿತ್ತು. ದೇವದೂತನು, "ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ. ನೀನು ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಪರಾತ್ಪರನಾದ ದೇವರ ಕುಮಾರನಾಗಿರುವನು ಮತ್ತು ಸದಾಕಾಲ ಆಳುವನು" ಎಂದು ಹೇಳಿದನು.
ಮರಿಯಳು, "ನಾನು ಕನ್ನಿಕೆಯಾಗಿದ್ದೇನೆ ಇದು ಹೇಗಾದೀತು?" ಎಂದು ಕೇಳಿದಳು. ದೇವದೂತನು, "ಪವಿತ್ರಾತ್ಮನು ನಿನ್ನ ಮೇಲೆ ಬರುವನು, ಪರಾತ್ಪರನಾದ ದೇವರ ಶಕ್ತಿಯು ನಿನ್ನ ಮೇಲೆ ಬರುವುದು. ಆದುದರಿಂದ ಆ ಶಿಶುವು ಪವಿತ್ರವಾಗಿರುವುದು ಮತ್ತು ಆತನು ದೇವರ ಮಗನಾಗಿರುವನು" ಎಂದು ವಿವರಿಸಿದನು. ದೇವದೂತನು ಹೇಳಿದ್ದನ್ನು ಮರಿಯಳಯ ನಂಬಿದ್ದಳು.
ಇದು ಸಂಭವಿಸಿದ ಕೂಡಲೇ, ಮರಿಯಳು ಹೋಗಿ ಎಲಿಸಬೇತಳನ್ನು ಭೇಟಿಯಾದಳು. ಮರಿಯಳು ಆಕೆಯನ್ನು ವಂದಿಸಿದ ತಕ್ಷಣವೇ, ಎಲಿಸಬೇತಳ ಕೂಸು ಆಕೆಯ ಗರ್ಭದಲ್ಲಿದ್ದ ಕುಣಿದಾಡಿತು. ದೇವರು ಅವರಿಗೆ ಮಾಡಿದ್ದಂಥ ಉಪಕಾರದ ಕುರಿತಾಗಿ ಆ ಸ್ತ್ರೀಯರಿಬ್ಬರು ಸಂತೋಷಿಸಿದರು. ಮರಿಯಳು ಎಲಿಸಬೇತಳ ಭೇಟಿಯಾಗಿ ಮೂರು ತಿಂಗಳ ಕಾಲ ಅಲ್ಲಿದ್ದ ನಂತರ, ಮರಿಯಳು ಮನೆಗೆ ಹಿಂದಿರುಗಿ ಹೋದಳು.
ಇದಾದನಂತರ, ಎಲಿಸಬೇತಳು ತನ್ನ ಗಂಡುಮಗುವಿನ ಜನ್ಮ ನೀಡಿದಳು. ದೇವದೂತನು ಆಜ್ಞಾಪಿಸಿದಂತೆಯೇ ಜಕರೀಯನು ಮತ್ತು ಎಲಿಸಬೇತಳು ಮಗುವಿಗೆ ಯೋಹಾನನೆಂದು ಹೆಸರಿಟ್ಟರು. ಆಗ ಜಕರೀಯನು ಮತ್ತೆ ಮಾತನಾಡಲಾಗುವಂತೆ ದೇವರು ಮಾಡಿದನು. ಜಕರೀಯನು, "ದೇವರಿಗೆ ಸ್ತೋತ್ರವಾಗಲಿ, ಏಕೆಂದರೆ ಆತನು ತನ್ನ ಜನರಿಗೆ ಸಹಾಯ ಮಾಡಲು ನೆನಪಿಸಿಕೊಂಡಿದ್ದಾನೆ! ಮಗುವೇ, ನೀನಾದರೋ ಪರಾತ್ಪರನಾದ ದೇವರ ಪ್ರವಾದಿಯಾಗಿರುವಿ. ಅವರು ತಮ್ಮ ಪಾಪಗಳಿಗಾಗಿ ಕ್ಷಮಾಪಣೆಯನ್ನು ಪಡೆದುಕೊಳ್ಳುವುದು ಹೇಗೆಂದು ನೀನು ಜನರಿಗೆ ತಿಳಿಸುವಿ" ಎಂದು ಹೇಳಿದನು.