unfoldingWord 08 - ದೇವರು ಯೋಸೇಫನನ್ನು ಮತ್ತು ಅವನ ಕುಟುಂಬವನ್ನು ಕಾಪಾಡಿದನು
ໂຄງຮ່າງ: Genesis 37-50
ໝາຍເລກສະຄຣິບ: 1208
ພາສາ: Kannada
ຜູ້ຊົມ: General
ຈຸດປະສົງ: Evangelism; Teaching
Features: Bible Stories; Paraphrase Scripture
ສະຖານະ: Approved
ສະຄຣິບເປັນຂໍ້ແນະນຳພື້ນຖານສຳລັບການແປ ແລະການບັນທຶກເປັນພາສາອື່ນ. ພວກມັນຄວນຈະຖືກດັດແປງຕາມຄວາມຈໍາເປັນເພື່ອເຮັດໃຫ້ພວກເຂົາເຂົ້າໃຈໄດ້ແລະມີຄວາມກ່ຽວຂ້ອງສໍາລັບແຕ່ລະວັດທະນະທໍາແລະພາສາທີ່ແຕກຕ່າງກັນ. ບາງຂໍ້ກໍານົດແລະແນວຄວາມຄິດທີ່ໃຊ້ອາດຈະຕ້ອງການຄໍາອະທິບາຍເພີ່ມເຕີມຫຼືແມ້ກະທັ້ງຖືກປ່ຽນແທນຫຼືຖືກລະເວັ້ນຫມົດ.
ຂໍ້ຄວາມສະຄຣິບ
ಅನೇಕ ವರ್ಷಗಳ ನಂತರ, ಯಾಕೋಬನು ವೃದ್ಧನಾಗಿದ್ದಾಗ, ತನ್ನ ನೆಚ್ಚಿನ ಮಗನಾದ ಯೋಸೇಫನನ್ನು, ಹಿಂಡುಗಳನ್ನು ಮೇಯಿಸುತ್ತಿದ್ದ ಅವನ ಸಹೋದರರನ್ನು ವಿಚಾರಿಸುವುದಕ್ಕಾಗಿ ಕಳುಹಿಸಿದನು.
ಯೋಸೇಫನ ಸಹೋದರರು ಅವನನ್ನು ದ್ವೇಷಿಸುತ್ತಿದ್ದರು ಏಕೆಂದರೆ ಅವರ ತಂದೆಯು ಆವನನ್ನು ಹೆಚ್ಚು ಪ್ರೀತಿಸುತ್ತಿದ್ದನು ಮತ್ತು ಯೋಸೇಫನು ಅವರ ಅಧಿಪತಿಯಾಗುವನೆಂಬ ಕನಸನ್ನು ಕಂಡಿದ್ದನು. ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ ಅವರು ಅವನನ್ನು ಅಪಹರಿಸಿದರು ಮತ್ತು ಅವನನ್ನು ಗುಲಾಮ ವ್ಯಾಪಾರಿಗಳಿಗೆ ಮಾರಿಬಿಟ್ಟರು.
ಯೋಸೇಫನ ಸಹೋದರರು ಮನೆಗೆ ಹಿಂದಿರುಗುವ ಮುನ್ನ, ಅವರು ಯೋಸೇಫನ ನಿಲುವಂಗಿಯನ್ನು ಹರಿದುಹಾಕಿ ಅದನ್ನು ಮೇಕೆ ರಕ್ತದಲ್ಲಿ ಅದ್ದಿ ಕಾಡುಮೃಗವು ಯೋಸೇಫನನ್ನು ಕೊಂದುಹಾಕಿತ್ತು ಎಂದು ಅವನು ಯೋಚಿಸುವಂತೆ ಮಾಡಲು ಅವರು ತಮ್ಮ ತಂದೆಗೆ ನಿಲುವಂಗಿಯನ್ನು ತೋರಿಸಿದರು. ಯಾಕೋಬನು ಬಹಳ ದುಃಖಿತನಾದ್ದನು.
ಗುಲಾಮ ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಐಗುಪ್ತ್ಯ ದೇಶಕ್ಕೆಕರೆದೊಯ್ದರು. ಅದು ನೈಲ್ ನದಿಯ ತೀರದಲ್ಲಿರುವ ದೊಡ್ಡ ಶಕ್ತಿಶಾಲಿ ದೇಶವಾಗಿತು. ಗುಲಾಮ ವ್ಯಾಪಾರಿಗಳು ಯೋಸೇಫನನ್ನು ಶ್ರೀಮಂತ ಸರ್ಕಾರಿ ಅಧಿಕಾರಿಗೆ ಗುಲಾಮನನ್ನಾಗಿ ಮಾರಿಬಿಟ್ಟರು. ಯೋಸೇಫನು ತನ್ನ ಯಜಮಾನನಿಗೆ ಚೆನ್ನಾಗಿ ಸೇವೆಮಾಡಿದನು, ಮತ್ತು ದೇವರು ಯೋಸೇಫನನ್ನು ಆಶೀರ್ವದಿಸಿದನು.
ಅವನ ಯಜಮಾನನ ಹೆಂಡತಿಯು ಯೋಸೇಫನೊಂದಿಗೆ ಸಂಗಮಿಸಲು ಪ್ರಯತ್ನಿಸಿದಳು, ಆದರೆ ಯೋಸೇಫನು ಈ ರೀತಿಯಲ್ಲಿ ದೇವರಿಗೆ ವಿರುದ್ಧವಾಗಿ ಪಾಪಮಾಡಲು ನಿರಾಕರಿಸಿದನು. ಅವಳು ಕೋಪಗೊಂಡಳು ಮತ್ತು ಯೋಸೇಫನ ಮೇಲೆ ತಪ್ಪು ಆರೋಪ ಮಾಡಿದಳು. ಹಾಗಾಗಿ ಅವನನ್ನು ಬಂಧಿಸಿ ಸೆರೆಮನೆಗೆ ಹಾಕಲಾಯಿತು. ಸೆರೆಮನೆಯಲ್ಲಿಯೂ, ಯೋಸೇಫನು ದೇವರಿಗೆ ನಂಬಿಗಸ್ತನಾಗಿದ್ದನು, ಮತ್ತು ದೇವರು ಅವನನ್ನು ಆಶೀರ್ವದಿಸಿದನು.
ಎರಡು ವರ್ಷಗಳ ನಂತರವೂ, ಯೋಸೇಫನು ಇನ್ನೂ ಸೆರೆಮನೆಯಲ್ಲಿದ್ದನು, ಅವನು ನಿರಪರಾಧಿಯಾಗಿದ್ದರೂ ಸಹ ಇನ್ನೂ ಸೆರೆಮನೆಯಲ್ಲಿದ್ದನು. ಒಂದು ರಾತ್ರಿ, ಫರೋಹನು ಎರಡು ಕನಸುಗಳನ್ನು ಕಂಡನು. ಈಜಿಪ್ಟಿನವರು ತಮ್ಮ ರಾಜರನ್ನು ಫರೋಹ ಎಂದು ಕರೆಯುತ್ತಿದ್ದರು, ಫರೋಹನು ಕಂಡ ಕನಸ್ಸುಗಳು ಅವನನ್ನು ಬಹಳವಾಗಿ ಕಳವಳಗೊಳಿಸಿದ್ದವು. ಅವನ ಆಲೋಚನೆಗಾರರಲ್ಲಿ ಒಬ್ಬರಿಗೂ ಅವನಿಗೆ ಕನಸುಗಳ ಅರ್ಥವನ್ನು ಹೇಳಲಾಗಲಿಲ್ಲ.
ದೇವರು ಯೋಸೇಫನಿಗೆ ಕನಸುಗಳನ್ನು ಅರ್ಥ ವಿವರಿಸುವ ಸಾಮರ್ಥ್ಯವನ್ನು ಕೊಟ್ಟಿದ್ದನು, ಆದ್ದರಿಂದ ಫರೋಹನು ಯೋಸೇಫನನ್ನು ಸೆರೆಮನೆಯಿಂದ ತನ್ನ ಬಳಿಗೆ ಕರೆಯಿಸಿಕೊಂಡನು. ಯೋಸೇಫನು ಫರೋಹನಿಗೆ ಬಂದ್ದಿದ್ದ ಕನಸುಗಳ ಅರ್ಥವನ್ನು ವಿವರಿಸಿದನು ಮತ್ತು "ದೇವರು ಸಮೃದ್ಧವಾದ ಫಸಲುಗಳ ಏಳು ವರ್ಷಗಳನ್ನು ಬರಮಾಡುತ್ತಾನೆ, ಅದಾದ ನಂತರ ಕ್ಷಾಮದ ಏಳು ವರ್ಷಗಳನ್ನು ಬರಮಾಡುತ್ತಾನೆ" ಎಂದು ಹೇಳಿದನು.
ಫರೋಹನು ಯೋಸೇಫನನ್ನು ಮೆಚ್ಚಿಕೊಂಡನು, ಅವನನ್ನು ಈಜಿಪ್ಟಿನಲ್ಲೆಲ್ಲಾ ಅತ್ಯಂತ ಪ್ರಬಲವುಳ್ಳ ದ್ವಿತೀಯ ವ್ಯಕ್ತಿಯಾಗಿ ನೇಮಿಸಿದನು!
ಉತ್ತಮ ಫಸಲಿನ ಏಳು ವರ್ಷಗಳ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಸಂಗ್ರಹಿಸಬೇಕೆಂದು ಯೋಸೇಫನು ಜನರಿಗೆ ಹೇಳಿದನು. ನಂತರ ಕ್ಷಾಮದ ಏಳು ವರ್ಷಗಳು ಬಂದಾಗ ಯೋಸೇಫನು ಜನರಿಗೆ ಆಹಾರವನ್ನು ಮಾರಿಸಿದನು, ಆದ್ದರಿಂದ ಅವರಿಗೆ ತಿನ್ನಲು ಬೇಕಾದಷ್ಟು ಆಹಾರವನ್ನು ಹೊಂದಿಕೊಂಡರು.
ಕ್ಷಾಮವು ಈಜಿಪ್ಟಿನಲ್ಲಿ ಮಾತ್ರವಲ್ಲದೆ ಯಾಕೋಬನು ಮತ್ತು ಅವನ ಕುಟುಂಬದವರು ವಾಸಿಸುತ್ತಿದ್ದ ಕಾನಾನಿನಲ್ಲಿಯೂ ಕೂಡಾ ತೀವ್ರವಾಗಿತ್ತು.
ಆದ್ದರಿಂದ ಯಾಕೋಬನು ಆಹಾರವನ್ನು ಖರೀದಿಸಲು ತನ್ನ ಹಿರಿಯ ಮಕ್ಕಳನ್ನು ಈಜಿಪ್ಟಿಗೆ ಕಳುಹಿಸಿದನು. ಆ ಸಹೋದರರು ಆಹಾರವನ್ನು ಖರೀದಿಸಲು ಯೋಸೇಫನ ಮುಂದೆ ನಿಂತಾಗ ಅವರು ಅವನ ಗುರುತನ್ನು ಹಿಡಿಯಲಿಲ್ಲ. ಆದರೆ ಯೋಸೇಫನು ಅವರ ಗುರುತನ್ನು ಹಿಡಿದನು.
ಯೋಸೇಫನು ತನ್ನ ಸಹೋದರರು ಬದಲಾಗಿದ್ದಾರೋ ಎಂದು ತಿಳಿದುಕೊಳ್ಳಲು ಅವರನ್ನು ಪರೀಕ್ಷಿಸಿದ ನಂತರ, ಅವನು ಅವರಿಗೆ, "ನಾನು ನಿಮ್ಮ ಸಹೋದರನಾದ ಯೋಸೇಫನು, ಭಯಪಡಬೇಡಿರಿ, ನೀವು ನನ್ನನ್ನು ಗುಲಾಮನಾಗಿ ಮಾರಿದಾಗ ಕೇಡನ್ನು ಮಾಡಲು ಪ್ರಯತ್ನಿಸಿದ್ದೀರಿ, ಆದರೆ ದೇವರು ಕೇಡನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿದನು! ನಾನು ನಿಮಗೂ ಮತ್ತು ನಿಮ್ಮ ಕುಟುಂಬಗಳಿಗೂ ಒದಗಿಸಿಕೊಡಲು ಆಗುವಂತೆ ನೀವು ಬಂದು ಈಜಿಪ್ಟಿನಲ್ಲಿ ವಾಸಿಸಿರಿ" ಎಂದು ಹೇಳಿದನು.
ಯೋಸೇಫನ ಸಹೋದರರು ಮನೆಗೆ ಹಿಂದಿರುಗಿ ಬಂದಾಗ ಅವರ ತಂದೆಯಾದ ಯಾಕೋಬನಿಗೆ ಯೋಸೇಫನು ಇನ್ನೂ ಬದುಕಿದ್ದಾನೆ ಎಂದು ಹೇಳಿದರು, ಅವನು ತುಂಬಾ ಸಂತೋಷಪಟ್ಟನು.
ಯಾಕೋಬನು ವೃದ್ಧನಾಗಿದ್ದರೂ, ಅವನು ತನ್ನ ಸರ್ವ ಕುಟುಂಬ ಸಮೇತನಾಗಿ ಈಜಿಪ್ಟಿಗೆ ತೆರಳಿದನು ಮತ್ತು ಅವರೆಲ್ಲರೂ ಅಲ್ಲಿ ವಾಸಿಸುತ್ತಿದ್ದರು. ಯಾಕೋಬನು ಸಾಯುವ ಮುನ್ನ ತನ್ನ ಪ್ರತಿಯೊಬ್ಬ ಮಕ್ಕಳನ್ನು ಆಶೀರ್ವದಿಸಿದನು.
ದೇವರು ಅಬ್ರಹಾಮನಿಗೆ ಕೊಟ್ಟ ಒಡಂಬಡಿಕೆಯು ವಾಗ್ದಾನಗಳು ಇಸಾಕನಿಗೆ, ನಂತರ ಯಾಕೋಬನಿಗೆ, ನಂತರ ಯಾಕೋಬನ ಹನ್ನೆರಡು ಗಂಡುಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ವರ್ಗಾಯಿಸಲ್ಪಟ್ಟಿತು. ಹನ್ನೆರಡು ಮಕ್ಕಳ ಸಂತತಿಯರು ಇಸ್ರಾಯೇಲಿನ ಹನ್ನೆರಡು ಕುಲಗಳಾದರು.