unfoldingWord 12 - ವಿಮೋಚನೆ (ನಿರ್ಗಮನ)
개요: Exodus 12:33-15:21
스크립트 번호: 1212
언어: Kannada
청중: General
목적: Evangelism; Teaching
Features: Bible Stories; Paraphrase Scripture
지위: Approved
이 스크립트는 다른 언어로 번역 및 녹음을위한 기본 지침입니다. 그것은 그것이 사용되는 각 영역에 맞게 다른 문화와 언어로 조정되어야 합니다. 사용되는 몇 가지 용어와 개념은 다른 문화에서는 다듬어지거나 생략해야 할 수도 있습니다.
스크립트 텍스트
ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟುಹೋಗುವುದರಲ್ಲಿ ಬಹಳ ಸಂತೋಷವುಳ್ಳವರಾಗಿದ್ದರು. ಅವರು ಇನ್ನೂ ಗುಲಾಮರಾಗಿರಲಿಲ್ಲ ಮತ್ತು ಅವರು ವಾಗ್ದತ್ತ ದೇಶಕ್ಕೆ ಹೋಗುತ್ತಿದ್ದರು! ಇಸ್ರಾಯೇಲ್ಯರು ಕೇಳಿಕೊಂಡದ್ದೆಲ್ಲವನ್ನು ಅಂದರೆ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಹ ಈಜಿಪ್ಟಿನವರು ಅವರಿಗೆ ಕೊಟ್ಟುಬಿಟ್ಟರು. ಇತರ ಜನಾಂಗಗಳ ಕೆಲವು ಜನರು ದೇವರನ್ನು ನಂಬಿದರು ಮತ್ತು ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟುಹೋಗುವಾಗ ಅವರೊಂದಿಗೆ ಹೋದರು.
ಉನ್ನತವಾದ ಮೇಘಸ್ತಂಭವು ಹಗಲಿನಲ್ಲಿ ಅವರ ಮುಂದೆ ಹೋಗುತ್ತಿತ್ತು. ರಾತ್ರಿಯಲ್ಲಿ ಅದು ಉನ್ನತವಾದ ಅಗ್ನಿಸ್ತಂಭದ ಹಾಗೆ ಅವರನನ್ನು ಮುನ್ನಡೆಸುತಿತ್ತು. ಮೇಘಸ್ತಂಭದಲ್ಲಿ ಮತ್ತು ಅಗ್ನಿಸ್ತಂಭದಲ್ಲಿ ಇದ್ದ ದೇವರು ಯಾವಾಗಲೂ ಅವರೊಂದಿಗೆ ಇದ್ದುಕೊಂಡು, ಅವರು ಪ್ರಯಾಣ ಮಾಡುವಾಗ ಅವರಿಗೆ ಮಾರ್ಗದರ್ಶನ ನೀಡಿದನು. ಅವರು ಮಾಡಬೇಕಾದ್ದದು ಇಷ್ಟೇ, ಅದೇನಂದರೆ ಆತನನ್ನು ಹಿಂಬಾಲಿಸುವುದು.
ಸ್ವಲ್ಪ ಸಮಯದ ನಂತರ, ಫರೋಹನು ಮತ್ತು ಅವನ ಜನರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ಅವರು ಇಸ್ರಾಯೇಲ್ಯರನ್ನು ಪುನಃ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಲು ಬಯಸಿದರು. ಆದ್ದರಿಂದ ಅವರು ಇಸ್ರಾಯೇಲ್ಯರನ್ನು ಬೆನ್ನಟ್ಟಿದರು. ದೇವರೇ ಅವರ ಮನಸ್ಸನ್ನು ಬದಲಾಯಿಸಿದನು. ಯೆಹೋವನು ತಾನು ಫರೋಹನಿಗಿಂತಲೂ ಮತ್ತು ಈಜಿಪ್ಟಿನವರ ಸರ್ವ ದೇವರುಗಳಿಗಿಂತಲೂ ಅಧಿಕ ಶಕ್ತಿಶಾಲಿ ಎಂದು ಎಲ್ಲರೂ ತಿಳಿಯಬೇಕೆಂದು ಬಯಸಿದ್ದರಿಂದ ಆತನು ಹೀಗೆ ಮಾಡಿದನು.
ಈಜಿಪ್ಟಿನ ಸೈನ್ಯವು ಬರುವುದನ್ನು ಇಸ್ರಾಯೇಲ್ಯರು ನೋಡಿದಾಗ, ತಾವು ಫರೋಹನ ಸೈನ್ಯಮತ್ತು ಕೆಂಪು ಸಮುದ್ರದ ನಡುವೆ ಸಿಕ್ಕಿಬಿದ್ದೇವು ಎಂದು ಅವರು ಅರಿತುಕೊಂಡರು. ಅವರು ಬಹಳ ಭಯಪಟ್ಟವರಾಗಿ, "ನಾವು ಯಾಕೆ ಈಜಿಪ್ಟನ್ನು ಬಿಟ್ಟು ಬಂದೆವು? ನಾವು ಸಾಯುತ್ತೇವಲ್ಲಾ!" ಎಂದು ಕೂಗಿದರು.
ಮೋಶೆಯು ಇಸ್ರಾಯೇಲ್ಯರಿಗೆ, "ಭಯಪಡಬೇಡಿರಿ! ದೇವರು ತಾನೇ ಇಂದು ನಿಮಗಾಗಿ ಹೋರಾಡುತ್ತಾನೆ ಮತ್ತು ನಿಮ್ಮನ್ನು ಕಾಪಾಡುತ್ತಾನೆ" ಎಂದು ಹೇಳಿದನು. ಆಗ ದೇವರು ಮೋಶೆಗೆ, "ಜನರಿಗೆ ಕೆಂಪು ಸಮುದ್ರದ ಕಡೆಗೆ ಹೋಗುವಂತೆ ಹೇಳು" ಎಂದು ಹೇಳಿದನು.
ಆಗ ದೇವರು ಮೇಘಸ್ತಂಭವನ್ನು ಇಸ್ರಾಯೇಲ್ಯರ ಮತ್ತು ಈಜಿಪ್ಟಿನವರ ನಡುವೆ ನಿಲ್ಲಿಸಿದನು, ಆದ್ದರಿಂದ ಈಜಿಪ್ಟಿನವರಿಗೆ ಇಸ್ರಾಯೇಲ್ಯರನ್ನು ನೋಡಲು ಆಗಲಿಲ್ಲ.
ಸಮುದ್ರದ ಮೇಲೆ ನಿನ್ನ ಕೈಯನ್ನು ಚಾಚು ಎಂದು ದೇವರು ಮೋಶೆಗೆ ಹೇಳಿದನು. ಆಗ ದೇವರು ಗಾಳಿಯು ಸಮುದ್ರದಲ್ಲಿರುವ ನೀರನ್ನು ಎಡಕ್ಕೆ ಮತ್ತು ಬಲಕ್ಕೆ ನೂಕುವಂತೆ ಮಾಡಿದನು, ಹಾಗೆ ಮಾಡಿದಾಗ ಸಮುದ್ರದಲ್ಲಿ ಮಾರ್ಗವುಂಟಾಯಿತ್ತು.
ಇಸ್ರಾಯೇಲ್ಯರು ಸಮುದ್ರದ ಮಧ್ಯೆ ಒಣನೆಲದಲ್ಲಿ ನಡೆದುಹೋದರು ಅವರ ಎರಡೂ ಬದಿಗಳಲ್ಲಿ ನೀರು ಗೋಡೆಯಂತೆ ಇತ್ತು.
ಇಸ್ರಾಯೇಲ್ಯರು ತಪ್ಪಿಸಿಕೊಂಡು ಹೋಗುವುದನ್ನು ಈಜಿಪ್ಟಿನವರು ನೋಡುವಂತೆ ದೇವರು ಮೇಘವನ್ನು ದಾರಿಯಿಂದ ಮೇಲಕ್ಕೆ ತೆಗೆದುಬಿಟ್ಟನು. ಈಜಿಪ್ಟಿನವರು ಅವರನ್ನು ಬೆನ್ನಟ್ಟಲು ನಿರ್ಧರಿಸಿದರು.
ಅವರು ಇಸ್ರಾಯೇಲ್ಯರನ್ನು ಸಮುದ್ರದ ಮಾರ್ಗವಾಗಿ ಬೆನ್ನಟ್ಟಿದರು, ಆದರೆ ದೇವರು ಈಜಿಪ್ಟಿನವರು ದಿಗಿಲುಪಡುವಂತೆ ಮಾಡಿದನು ಮತ್ತು ಅವರ ರಥಗಳು ಸಿಕ್ಕಿಕೊಳ್ಳುವಂತೆ ಮಾಡಿದನು. ಅವರು "ಓಡಿಹೋಗಿರಿ! ದೇವರು ಇಸ್ರಾಯೇಲ್ಯರಿಗಾಗಿ ಯುದ್ಧಮಾಡುತ್ತಿದ್ದಾನೆ" ಎಂದು ಕೂಗಿದರು.
ಇಸ್ರಾಯೇಲ್ಯರು ಸಮುದ್ರದ ಇನ್ನೊಂದು ಕಡೆಗೆ ಬಂದರು. ಆಗ ನೀರಿನ ಮೇಲೆ ತನ್ನ ಕೈಯನ್ನು ಮತ್ತೊಮ್ಮೆ ಚಾಚಬೇಕೆಂದು ಎಂದು ದೇವರು ಮೋಶೆಗೆ ಹೇಳಿದನು. ಮೋಶೆ ಅದನ್ನು ಮಾಡಿದಾಗ, ಈಜಿಪ್ಟ್ ಸೈನ್ಯದ ಮೇಲೆ ನೀರು ಅವರನ್ನು ಆವರಿಸಿಕೊಂಡು ನಂತರ ಅದರ ಸಾಮಾನ್ಯ ಸ್ಥಿತಿಗೆ ಮರಳಿತು. ಆಗ ಇಡೀ ಈಜಿಪ್ಟಿನ ಸೈನ್ಯವು ಮುಳುಗಿಹೋಯಿತು.
ಈಜಿಪ್ಟಿನವರು ಸತ್ತುಹೋದ್ದದನ್ನು ಇಸ್ರಾಯೇಲ್ಯರು ನೋಡಿದಾಗ, ಅವರು ದೇವರನ್ನು ನಂಬಿದರು . ಅದು ಮಾತ್ರವಲ್ಲ ಮೋಶೆಯು ದೇವರ ಪ್ರವಾದಿ ಎಂದು ಸಹ ಅವರು . ನಂಬಿದರು.
ದೇವರು ಅವರನ್ನು ಮರಣದಿಂದಲೂ ಮತ್ತು ಗುಲಾಮಗಿರಿಯಿಂದಲೂ ರಕ್ಷಿಸಿದ ಕಾರಣ ಇಸ್ರಾಯೇಲ್ಯರು ಬಹಳವಾಗಿ ಸಂತೋಷಪಟ್ಟರು . ಈಗ ಅವರು ದೇವರನ್ನು ಆರಾಧಿಸಲು ಮತ್ತು ಆತನಿಗೆ ವಿಧೇಯರಾಗಿರಲು ಸ್ವತಂತ್ರರಾಗಿದ್ದರು. ಆತನು ಅವರನ್ನು ಈಜಿಪ್ಟಿನ ಸೈನ್ಯದಿಂದ ಕಾಪಾಡಿದ್ದರಿಂದ. ಇಸ್ರಾಯೇಲ್ಯರು ತಮ್ಮ ಸ್ವಾತಂತ್ರ್ಯವನ್ನು ಸಂಭ್ರಮಿಸಲು ಮತ್ತು ದೇವರನ್ನು ಸ್ತುತಿಸಲು ಅನೇಕ ಹಾಡುಗಳನ್ನು ಹಾಡಿದರು ಏಕೆಂದರೆ
ದೇವರು ಈಜಿಪ್ಟಿನವರನ್ನು ಹೇಗೆ ಸೋಲಿಸಿದನೆಂಬುದನ್ನು ಮತ್ತು ಗುಲಾಮತನದಿಂದ ಅವರನ್ನು ಹೇಗೆ ಬಿಡುಗಡೆ ಮಾಡಿದನೆಂಬುದನ್ನು ನೆನಪಿಸಿಕೊಳ್ಳಲು ಪ್ರತಿ ವರ್ಷವು ಹಬ್ಬವನ್ನು ಆಚರಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು. ಈ ಹಬ್ಬವನ್ನು ಪಸ್ಕ ಹಬ್ಬ ಎಂದು ಕರೆಯುತ್ತಾರೆ. ಅದರಲ್ಲಿ, ಅವರು ಆರೋಗ್ಯಕರವಾದ ಕುರಿಮರಿಯನ್ನು ವಧಿಸಿ, ಅದನ್ನು ಸುಟ್ಟು, ಹುಳಿಯಿಲ್ಲದೆ ಮಾಡಿದ ರೊಟ್ಟಿಯೊಂದಿಗೆ ಅದನ್ನು ತಿನ್ನುವ ಮೂಲಕ ಆಚರಿಸಬೇಕಾಗಿತು.