unfoldingWord 09 - ಮೋಶೆಯನ್ನು ಕರೆದ ದೇವರು
개요: Exodus 1-4
스크립트 번호: 1209
언어: Kannada
청중: General
목적: Evangelism; Teaching
Features: Bible Stories; Paraphrase Scripture
지위: Approved
이 스크립트는 다른 언어로 번역 및 녹음을위한 기본 지침입니다. 그것은 그것이 사용되는 각 영역에 맞게 다른 문화와 언어로 조정되어야 합니다. 사용되는 몇 가지 용어와 개념은 다른 문화에서는 다듬어지거나 생략해야 할 수도 있습니다.
스크립트 텍스트
ಯೋಸೇಫನು ಸತ್ತ ನಂತರ ಅವನ ಎಲ್ಲಾ ಸಂಬಂಧಿಕರು ಈಜಿಪ್ಟಿನಲ್ಲಿಯೇ ತಂಗಿದರು. ಅವರು ಮತ್ತು ಅವರ ಸಂತತಿಯವರು ಬಹಳ ವರ್ಷಗಳು ಅಲ್ಲಿಯೇ ವಾಸಿಸುತ್ತಿದ್ದರು ಮತ್ತು ಅನೇಕ ಮಕ್ಕಳನ್ನು ಪಡೆದರು. ಅವರನ್ನು ಇಸ್ರಾಯೇಲ್ಯರು ಎಂದು ಕರೆಯಲಾಯಿತು.
ನೂರಾರು ವರ್ಷಗಳ ನಂತರ, ಇಸ್ರಾಯೇಲ್ಯರ ಸಂಖ್ಯೆಯು ಬಹಳ ಅಧಿಕವಾಯಿತ್ತು. ಯೋಸೇಫನು ಅವರಿಗೆ ಮಾಡಿದ ಸಹಾಯಗಳಿಗೆ ಈಜಿಪ್ತಿಯರು ಕೃತಜ್ಞರಾಗಿರಲಿಲ್ಲ. ಅವರು ಇಸ್ರಾಯೇಲ್ಯರಿಗೆ ಭಯಪಟ್ಟರು ಏಕೆಂದರೆ ಅವರು ಅಧಿಕವಾಗಿದ್ದರು. ಆ ಸಮಯದಲ್ಲಿ ಈಜಿಪ್ಟನ್ನು ಆಳುತ್ತಿದ್ದ ಫರೋಹನು ಇಸ್ರಾಯೇಲ್ಯರನ್ನು ಈಜಿಪ್ತಿಯರಿಗೆ ಗುಲಾಮರನ್ನಾಗಿ ಮಾಡಿದನು.
ಅನೇಕ ಕಟ್ಟಡಗಳನ್ನು ಮತ್ತು ಇಡೀ ಪಟ್ಟಣಗಳನ್ನು ಕಟ್ಟುವಂತೆ ಈಜಿಪ್ತಿಯರು ಇಸ್ರಾಯೇಲ್ಯರನ್ನು ಬಲಾತ್ಕರಿಸಿದರು. ಕಠಿಣವಾದ ಕೆಲಸವು ಅವರ ಜೀವನವನ್ನು ಬೇಸರಗೊಳಿಸಿತು, ಆದರೆ ದೇವರು ಅವರನ್ನು ಆಶೀರ್ವದಿಸಿದನು, ಮತ್ತು ಅವರು ಇನ್ನೂ ಅಧಿಕ ಮಕ್ಕಳನ್ನು ಪಡೆದರು.
ಇಸ್ರಾಯೇಲ್ಯರು ಅನೇಕ ಕೂಸುಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ಫರೋಹನು ನೋಡಿದನು. ಆದ್ದರಿಂದ ಅವನು ಇಸ್ರಾಯೇಲ್ಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಗೆ ಎಸೆದು ಕೊಲ್ಲುವಂತೆ ತನ್ನ ಜನರಿಗೆ ಆಜ್ಞಾಪಿಸಿದನು.
ಒಬ್ಬ ಇಸ್ರಾಯೇಲ್ಯ ಸ್ತ್ರೀಯು ಮಗುವನ್ನು ಹೆತ್ತಳು. ಅವಳು ಮತ್ತು ಅವಳ ಪತಿಯು ಅವರಿಂದ ಆಗುವಷ್ಟರ ಮಟ್ಟಿಗೆ ಆ ಮಗುವನ್ನು ಬಚ್ಚಿಟ್ಟರು.
ಹುಡುಗನ ತಂದೆತಾಯಿಗಳು ಅವನನ್ನು ಬಚ್ಚಿಡಲು ಆಗದೆಹೋದಾಗ, ಕೊಲ್ಲಲ್ಪಡುವುದರಿಂದ ಅವನನ್ನು ಕಾಪಾಡುವುದಕ್ಕಾಗಿ ಅವರು ತೇಲುವ ಪೆಟ್ಟಿಗೆಯಲ್ಲಿ ಅವನನ್ನು ಇಟ್ಟು, ನೈಲ್ ನದಿಯ ಅಂಚಿನಲ್ಲಿರುವ ಜಂಬುಹುಲ್ಲಿನಲ್ಲಿ ಇಟ್ಟರು. ಅವನಿಗೆ ಏನಾಗುವುದೆಂದು ತಿಳಿದುಕೊಳ್ಳುವುದಕ್ಕೆ ಅವನ ಅಕ್ಕ ಅದನ್ನು ನೋಡುತ್ತಿದ್ದಳು.
ಫರೋಹನ ಮಗಳು ಪೆಟ್ಟಿಗೆಯನ್ನು ನೋಡಿದಳು ಮತ್ತು ಅದರೊಳಗೆ ಇದ್ದ ಮಗುವನ್ನು ನೋಡಿದಳು. ಅವಳು ಮಗುವನ್ನು ನೋಡಿದಾಗ, ಅವಳು ಅವನನ್ನು ತನ್ನ ಸ್ವಂತ ಮಗನಾಗಿ ತೆಗೆದುಕೊಂಡಳು. ಸ್ತ್ರೀಯು ಮಗುವಿನ ಸ್ವಂತ ತಾಯಿಯೆಂದು ತಿಳಿಯದೆಯೇ ಅವನನ್ನು ಸಾಕಲು ಅವಳು ಆ ಇಸ್ರಾಯೇಲ್ ಸ್ತ್ರೀಯನ್ನು ಸಂಬಳಕ್ಕೆ ಗೊತ್ತುಮಾಡಿದಳು. ಆ ಮಗುವು ದೊಡ್ಡವನಾಗುವ ತನಕ ಅಂದರೆ ತನ್ನ ತಾಯಿಯ ಹಾಲಿನ ಅಗತ್ಯವಿರುವ ತನಕ ಅವನನ್ನು ಸಾಕಿದಳು, ನಂತರ ಅವಳು ಅವನನ್ನು ಫರೋಹನ ಮಗಳಿಗೆ ಹಿಂದಿರುಗಿಸಿದಳು, ಆಕೆಯು ಅವನಿಗೆ ಮೋಶೆ ಎಂದು ಹೆಸರಿಟ್ಟಳು.
ಮೋಶೆಯು ಬೆಳೆದು ದೊಡ್ಡವನಾದಾಗ, ಒಂದು ದಿನ, ಒಬ್ಬ ಈಜಿಪ್ಟಿನವನು ಇಸ್ರಾಯೇಲ್ಯರ ಗುಲಾಮನನ್ನು ಹೊಡೆಯುತ್ತಿರುವುದನ್ನು ನೋಡಿದನು. ಮೋಶೆಯು ತನ್ನ ಜೊತೆ ಇಸ್ರಾಯೇಲ್ಯನನ್ನು ರಕ್ಷಿಸಲು ಪ್ರಯತ್ನಿಸಿದನು.
ಮೋಶೆಯು ಯಾರೂ ನೋಡುವುದಿಲ್ಲ ಎಂದು ಭಾವಿಸಿ, ಅವನು ಈಜಿಪ್ಟಿನವನನ್ನು ಕೊಂದು ಅವನ ಶವವನ್ನು ಹೂಣ್ಣಿಟ್ಟನು. ಆದರೆ ಮೋಶೆಯು ಮಾಡಿದ್ದನ್ನು ಯಾರೊ ಒಬ್ಬರು ನೋಡಿದರು.
ಮೋಶೆಯು ಮಾಡಿದ್ದನ್ನು ಫರೋಹನು ತಿಳಿದುಕೊಂಡನು. ಅವನು ಅವನನ್ನು ಕೊಲ್ಲಲು ಪ್ರಯತ್ನಿಸಿದನು, ಆದರೆ ಮೋಶೆಯು ಈಜಿಪ್ಟಿನಿಂದ ಮರುಭೂಮಿಗೆ ಓಡಿಹೋದನು. ಫರೋಹನ ಸೈನಿಕರಿಗೆ ಅವನು ಅಲ್ಲಿ ಸಿಗಲಿಲ್ಲ.
ಮೋಶೆಯು ಐಗುಪ್ತದಿಂದ ದೂರದಲ್ಲಿರುವ ಅಡವಿಯಲ್ಲಿ ಕುರುಬನಾದನು. ಅವನು ಆ ಸ್ಥಳದಲ್ಲಿರುವ ಒಬ್ಬ ಸ್ತ್ರೀಯನ್ನು ಮದುವೆಯಾದನು ಮತ್ತು ಇಬ್ಬರು ಗಂಡುಮಕ್ಕಳನ್ನು ಪಡೆದನು.
ಮೋಶೆಯು ತನ್ನ ಮಾವನ ಕುರಿಗಳ ಹಿಂಡನ್ನು ಮೇಯಿಸುತ್ತಿದ್ದನು. ಒಂದು ದಿನ ಅವನು ಬೂದಿಯಾಗದೆ ಬೆಂಕಿಯಿಂದ ಉರಿಯುತ್ತಿರುವ ಪೊದೆಯನ್ನು ಕಂಡನು. ಅವನು ಅದನ್ನು ನೋಡಲು ಪೊದೆಯ ಹತ್ತಿರಕ್ಕೆ ಹೋದನು. ಅವನು ಬಹಳ ಹತ್ತಿರಕ್ಕೆ ಹೋದಾಗ, ದೇವರು ಅವನೊಂದಿಗೆ ಮಾತಾಡಿದನು. ಆತನು, "ಮೋಶೆ, ನಿನ್ನ ಕೆರಗಳನ್ನು ತೆಗೆದುಹಾಕು. ನೀನು ಪರಿಶುದ್ಧ ಸ್ಥಳದ ಮೇಲೆ ನಿಂತಿರುವಿ" ಎಂದು ಹೇಳಿದನು.
ದೇವರು, "ನನ್ನ ಜನರ ಕಷ್ಟಗಳನ್ನು ನಾನು ನೋಡಿದೆನು. ನಾನು ಈಜಿಪ್ಟಿನಲ್ಲಿರುವ ಇಸ್ರಾಯೇಲ್ಯರನ್ನು ಗುಲಾಮಗಿರಿಯಿಂದ ಹೊರಗೆ ಕರೆತರಲು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ನಾನು ಅಬ್ರಹಾಮ್, ಇಸಾಕ್ ಯಾಕೋಬರಿಗೆ ವಾಗ್ದಾನ ಮಾಡಿದ ಕಾನಾನ್ ದೇಶವನ್ನು ಅವರಿಗೆ ಕೊಡುವೆನು" ಎಂದು ಹೇಳಿದನು.
ಮೋಶೆಯು, "ನನ್ನನ್ನು ಕಳುಹಿಸಿದವರು ಯಾರೆಂದು ಜನರು ತಿಳಿಯಬೇಕೆಂದು ಬಯಸಿದರೆ, ನಾನು ಏನು ಹೇಳಬೇಕು?" ಎಂದು ಕೇಳಿದನು. ದೇವರು, " ನಾನು ಇರುವಾತನೆ (ಇರುವವನಾಗಿ ಇರುವವನು ನಾನೇ), (ಇರುವಾತನು) ನಿಮ್ಮ ಬಳಿಗೆ ನನ್ನನ್ನು ಕಳುಹಿಸಿದ್ದಾನೆ’ ಎಂದು ಅವರಿಗೆ ಹೇಳು, ‘ನಾನು ಯೆಹೋವನು, ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರು. ಇದು ಸದಾಕಾಲಕ್ಕೂ ಇರುವ ನನ್ನ ಹೆಸರು’ ಎಂದು ಸಹ ಅವರಿಗೆ ಹೇಳಬೇಕು" ಎಂದು ಹೇಳಿದನು.
ಮೋಶೆಯು ಭಯಭೀತನಾಗಿದ್ದನು ಮತ್ತು ಫರೋಹನ ಬಳಿಗೆ ಹೋಗಲು ಬಯಸಲಿಲ್ಲ, ಏಕೆಂದರೆ ಅವನು ತನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲವೆಂದು ಯೋಚಿಸಿದನು, ಆದ್ದರಿಂದ ಮೋಶೆಯ ಅಣ್ಣನಾದ ಆರೋನನನ್ನು ಅವನಿಗೆ ಸಹಾಯ ಮಾಡಲು ದೇವರು ಕಳುಹಿಸಿದನು.