unfoldingWord 02 - ಪಾಪವು ಲೋಕವನ್ನು ಪ್ರವೇಶಿಸಿದ್ದು
개요: Genesis 3
스크립트 번호: 1202
언어: Kannada
주제: Sin and Satan (Sin, disobedience, Punishment for guilt)
청중: General
목적: Evangelism; Teaching
Features: Bible Stories; Paraphrase Scripture
지위: Approved
이 스크립트는 다른 언어로 번역 및 녹음을위한 기본 지침입니다. 그것은 그것이 사용되는 각 영역에 맞게 다른 문화와 언어로 조정되어야 합니다. 사용되는 몇 가지 용어와 개념은 다른 문화에서는 다듬어지거나 생략해야 할 수도 있습니다.
스크립트 텍스트
ದೇವರು ಅವರಿಗಾಗಿ ಉಂಟುಮಾಡಿದ ಸುಂದರವಾದ ಉದಾನ್ಯವನದಲ್ಲಿ ಆದಾಮನು ಮತ್ತು ಅವನ ಹೆಂಡತಿಯು ಬಹಳ ಸಂತೋಷದಿಂದ ಜೀವಿಸುತ್ತಿದ್ದರು. ಅವರುವಸ್ತ್ರಗಳನ್ನು ಧರಿಸಿಕೊಂಡಿರಲಿಲ್ಲ, ಅದು ಅವರಿಗೆ ನಾಚಿಕೆಯನ್ನುಂಟು ಮಾಡಲಿಲ್ಲ, ಏಕೆಂದರೆ ಲೋಕದಲ್ಲಿ ಪಾಪವಿರಲಿಲ್ಲ. ಅವರು ಯಾವಾಗಲುಉದಾನ್ಯವನದಲ್ಲಿ ನಡೆದಾಡುತ್ತಾ ದೇವರೊಂದಿಗೆ ಮಾತನಾಡುತ್ತಿದ್ದರು.
ಆದರೆ ತೋಟದಲ್ಲಿ ಒಂದು ಸರ್ಪವಿತ್ತು. ಅದು ಅತಿ ಯುಕ್ತಿಯುಳ್ಳದ್ದಾಗಿತ್ತು. ಅದು ಆ ಸ್ತ್ರೀಯನ್ನು, "ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನು ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವುದು ನಿಜವೋ?" ಎಂದು ಕೇಳಿತು.
ಆ ಸ್ತ್ರೀಯು, “ಒಳ್ಳೇಯದರ ಮತ್ತು ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಹೊರತುಪಡಿಸಿ ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ತಿನ್ನಬಹುದು ನೀವು ಅ ಎರಡು ಮರದ ಹಣ್ಣನ್ನು ತಿನ್ನಲೂ ಬಾರದು, ಮುಟ್ಟಲೂ ಕೂಡದು, ತಿಂದರೆ ಸಾಯುವಿರಿ’” ಎಂದು ದೇವರು ನಮಗೆ ಹೇಳಿದ್ದಾನೆ ಅಂದಳು.
ಸರ್ಪವು ಸ್ತ್ರೀಗೆ, "ಅದು ಸತ್ಯವಲ್ಲ! ನೀವು ಸಾಯುವುದಿಲ್ಲ, ನೀವು ಇದರ ಹಣ್ಣನ್ನು ತಿಂದ ಕ್ಷಣವೇ ನಿಮ್ಮ ಕಣ್ಣುಗಳು ತೆರೆಯುವವು, ನೀವು ದೇವರುಗಳಂತೆ ಆಗಿ ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನು ತಿಳಿಯುವಿರಿ, ಇದು ದೇವರಿಗೆ ಚೆನ್ನಾಗಿ ಗೊತ್ತು" ಎಂದು ಹೇಳಿತು.
ಆ ಸ್ತ್ರೀಯು ಹಣ್ಣು ತಿನ್ನುವುದಕ್ಕೆ ರುಚಿಕರವಾಗಿಯೂ, ನೋಡುವುದಕ್ಕೆ ರಮ್ಯವಾಗಿಯೂ ಇದೆ ಎಂದು ಕಂಡಳು. ಅವಳು ಜ್ಞಾನವಂತಳಾಗಬೇಕೆಂದು ಬಯಸಿದಳು, ಆದ್ದರಿಂದ ಅವಳು ಕೆಲವು ಹಣ್ಣುಗಳನ್ನು ತೆಗೆದುಕೊಂಡು ತಿಂದಳು. ಅವಳು ತನ್ನ ಸಂಗಡ ಇದ್ದ ಗಂಡನಿಗೂ ಕೊಡಲೂ, ಅವನೂ ತಿಂದನು.
ಕೂಡಲೆ ಅವರ ಕಣ್ಣುಗಳು ತೆರೆದವು, ಮತ್ತು ಅವರು ತಾವು ಬೆತ್ತಲೆಯಾಗಿದ್ದೇವೆಂದು ತಿಳಿದುಕೊಂಡರು. ಅವರು ತಮ್ಮ ದೇಹಗಳನ್ನು ಮುಚ್ಚಿಕೊಳ್ಳಲು ಎಲೆಗಳನ್ನು ಹೊಲೆದು ವಸ್ತ್ರವನ್ನಾಗಿ ಮಾಡಿಕೊಂಡರು.
ಆ ಮನುಷ್ಯನು ಮತ್ತು ಅವನ ಹೆಂಡತಿಯು ದೇವರು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ಕೇಳಿಸಿಕೊಂಡರು. ಅವರು ದೇವರಿಗೆ ಕಾಣದಂತೆ ಬಚ್ಚಿಟ್ಟುಕೊಂಡರು. ಆಗ ದೇವರು ಆ ಮನುಷ್ಯನನ್ನು , “ನೀನು ಎಲ್ಲಿದ್ದೀ?” ಎಂದು ಕೇಳಿದನು. ಅದಕ್ಕೆ ಆದಾಮನು, “ನೀನು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ನಾನು ಕೇಳಿ, ಬೆತ್ತಲೆಯಾಗಿರುವುದರಿಂದ ಹೆದರಿ ಅಡಗಿಕೊಂಡೆನು” ಎಂದನು.
ಆಗ ದೇವರು “ನೀನು ಬೆತ್ತಲೆಯಾಗಿದ್ದೀಯೆಂದು ನಿನಗೆ ತಿಳಿಸಿದವರಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದಿಯಾ?” ಎಂದು ಕೇಳಿದನು. ಅದಕ್ಕೆ ಆ ಮನುಷ್ಯನು, “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಈ ಸ್ತ್ರೀಯು, ಆ ಮರದ ಹಣ್ಣನ್ನು ನನಗೆ ಕೊಟ್ಟಳು” ಅಂದನು. ಆಗ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು” ಎಂದು ಉತ್ತರ ಕೊಟ್ಟಳು.
ದೇವರು ಸರ್ಪಕ್ಕೆ, “ನೀನು ಶಾಪಗ್ರಸ್ತವಾದಿ! ನೀನು ಹೊಟ್ಟೆಯಿಂದ ಹರಿದು ಮಣ್ಣೇ ತಿನ್ನುವಿ. ನೀನು ಮತ್ತು ಸ್ತ್ರೀಯು ಪರಸ್ಪರ ದ್ವೇಷಿಸುವಿರಿ, ಮತ್ತು ನಿನ್ನ ಮಕ್ಕಳು ಮತ್ತು ಆಕೆಯ ಮಕ್ಕಳು ಸಹ ಪರಸ್ಪರ ದ್ವೇಷಿಸುವರು. ಸ್ತ್ರೀಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು. ನೀನು ಅದರ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು.
ಆಮೇಲೆ ದೇವರು ಸ್ತ್ರೀಗೆ, “ನಾನು ನಿನ್ನ ಗರ್ಭವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು. ಗಂಡನ ಮೇಲೆ ನಿನಗೆ ಬಯಕೆ ಇರುವುದು, ಆದರೆ ಅವನು ನಿನ್ನ ಮೇಲೆ ಆಳ್ವಿಕೆ ಮಾಡುವನು” ಎಂದು ಹೇಳಿದನು.
ಪುರುಷನಿಗೆ, “ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ನನಗೆ ಅವಿಧೇಯನಾದೆ. ಇದರ ನಿಮಿತ್ತ ಈಗ ಭೂಮಿಯು ಶಾಪಗ್ರಸ್ತವಾಯಿತು, ಮತ್ತು ನೀನು ಆಹಾರಪದಾರ್ಥಗಳನ್ನು ಬೆಳೆಯಲು ಕಠಿಣವಾಗಿ ದುಡಿಯಬೇಕು. ಅನಂತರ ನೀನು ಸಾಯುವಿ, ಮತ್ತು ನಿನ್ನ ದೇಹವು ಮಣ್ಣಿಗೆ ಸೇರುವುದು” ಎಂದು ಹೇಳಿದನು. ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಅದರ್ ಅರ್ಥ “ಜೀವದಾಯಕಿ” ಎಂಬುದು , ಏಕೆಂದರೆ ಆಕೆಯೇ ಎಲ್ಲಾ ಜನರಿಗೆ ಮೂಲತಾಯಿಯಾಗಿದ್ದಾಳೆ. ದೇವರು ಆದಾಮನಿಗೂ ಅವನ ಹವ್ವಳಿಗೂ ಪ್ರಾಣಿಯ ಚರ್ಮದಿಂದ ವಸ್ತ್ರವನ್ನು ಮಾಡಿ ತೊಡಿಸಿದನು.
ದೇವರು, “ಈ ಮನುಷ್ಯರು ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನರಿತು ನಮ್ಮಂತೆ ಅದರಲ್ಲಾ? ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತಿಂದು ಶಾಶ್ವತವಾಗಿ ಬದುಕುವವನಾಗಬಾರದು” ಎಂದು ಹೇಳಿದನು. ಅದುದರಿಂದ ದೇವರು ಆದಾಮ ಮತ್ತು ಹವ್ವರನ್ನು ತೋಟದಿಂದ ಹೊರಗೆ ಕಳುಹಿಸಿದನು. ಯಾರು ಜೀವವೃಕ್ಷದ ಹಣ್ಣನ್ನು ತಿನ್ನದಂತೆ ತಡೆಯಲು ದೇವರು ಶಕ್ತಿಯುತವಾದ ದೇವದೂತರನ್ನು ತೋಟದ ಪ್ರವೇಶದ್ವಾರದಲ್ಲಿ ಇರಿಸಿದನು.