unfoldingWord 39 - ಯೇಸುವನ್ನು ನ್ಯಾಯವಿಚಾರಣೆಗೆ ಒಳಪಡಿಸಿಡಿದ್ದು
מתווה: Matthew 26:57-27:26; Mark 14:53-15:15; Luke 22:54-23:25; John 18:12-19:16
מספר תסריט: 1239
שפה: Kannada
קהל: General
מַטָרָה: Evangelism; Teaching
Features: Bible Stories; Paraphrase Scripture
סטָטוּס: Approved
סקריפטים הם קווים מנחים בסיסיים לתרגום והקלטה לשפות אחרות. יש להתאים אותם לפי הצורך כדי להפוך אותם למובנים ורלוונטיים לכל תרבות ושפה אחרת. מונחים ומושגים מסוימים שבהם נעשה שימוש עשויים להזדקק להסבר נוסף או אפילו להחלפה או להשמיט לחלוטין.
טקסט תסריט
ಆಗ ಮಧ್ಯರಾತ್ರಿಯಾಗಿತ್ತು. ಸೈನಿಕರು ಯೇಸುವನ್ನು ಮಹಾಯಾಜಕನ ಮನೆಗೆ ಕರೆದೊಯ್ದರು, ಏಕೆಂದರೆ ಅವನು ಯೇಸುವನ್ನು ಪ್ರಶ್ನಿಸಲು ಬಯಸಿದನು. ಪೇತ್ರನು ಅವರನ್ನು ದೂರದಿಂದ ಹಿಂಬಾಲಿಸುತ್ತಿದ್ದನು. ಸೈನಿಕರು ಯೇಸುವನ್ನು ಮನೆಯೊಳಗೆ ಕರೆದುಕೊಂಡು ಹೋದಾಗ, ಪೇತ್ರನು ಹೊರಗೆ ಇದ್ದುಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಿದ್ದನು.
ಯೆಹೂದ್ಯ ಮುಖಂಡರು ಮನೆಯ ಒಳಗೆ ಯೇಸುವನ್ನು ನ್ಯಾಯವಿಚಾರಣೆ ಮಾಡುತ್ತಿದ್ದರು. ಆತನ ಬಗ್ಗೆ ಸುಳ್ಳುಸಾಕ್ಷಿ ಹೇಳಿದ್ದ ಅನೇಕ ಜನರನ್ನು ಅವರು ಕರೆತಂದರು. ಆದರೆ ಅವರ ಹೇಳಿಕೆಗಳು ಪರಸ್ಪರ ತಾಳೆಯಾಗಲಿಲ್ಲ, ಆದ್ದರಿಂದ ಯೆಹೂದ್ಯ ಮುಖಂಡರು ಆತನನ್ನು ತಪ್ಪಿತಸ್ಥನೆಂದು ಸಾಬೀತುಪಡಿಸಲು ಆಗಲಿಲ್ಲ. ಯೇಸು ಏನು ಹೇಳಲಿಲ್ಲ.
ಅಂತಿಮವಾಗಿ, ಮಹಾಯಾಜಕನು ಯೇಸುವನ್ನು ದಿಟ್ಟಿಸಿ ನೋಡಿ, "ನೀನು ದೇವಕುಮಾರನಾದ ಮೆಸ್ಸೀಯನಾಗಿದ್ದರೆ ಅದನ್ನು ನಮಗೆ ಹೇಳಬೇಕು" ಎಂದು ಹೇಳಿದನು.
ಯೇಸು, "ನಾನೇ, ನಾನು ದೇವರೊಂದಿಗೆ ಆಸೀನನಾಗಿ ಪರಲೋಕದಿಂದ ಬರುವುದನ್ನು ನೀವು ನೋಡುತ್ತೀರಿ" ಎಂದು ಹೇಳಿದನು. ಮಹಾಯಾಜಕನು ಯೇಸು ಹೇಳಿದ ಮಾತಿನ ನಿಮಿತ್ತ ಅವನು ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು ಏಕೆಂದರೆ. ಅವನು ಇತರ ಮುಖಂಡರಿಗೆ, "ಈ ಮನುಷ್ಯನು ಏನು ಮಾಡಿದ್ದಾನೆಂದು ನಮಗೆ ಹೇಳಲು ಬೇರೆ ಯಾವುದೇ ಸಾಕ್ಷಿಗಳು ಬೇಕಾಗಿಲ್ಲ! ಆತನು ತಾನೇ ದೇವಕುಮಾರನೆಂದು ಹೇಳುವುದನ್ನು ನೀವು ಕೇಳಿದಿರಿ, ಆತನ ಬಗ್ಗೆ ನಿಮ್ಮ ನಿರ್ಣಯ ಏನು?" ಎಂದು ಕೂಗಿ ಹೇಳಿದನು.
ಎಲ್ಲಾ ಯೆಹೂದ್ಯ ಮುಖಂಡರು ಮಹಾಯಾಜಕನಿಗೆ, "ಈತನು ಸಾಯುವದಕ್ಕೆ ಯೋಗ್ಯನು!" ಎಂದು ಉತ್ತರಿಸಿದರು. ನಂತರ ಅವರು ಯೇಸುವಿನ ಕಣ್ಣಿಗೆ ಬಟ್ಟೆಕಟ್ಟಿ, ಆತನ ಮೇಲೆ ಉಗುಳಿ, ಆತನನ್ನು ಹೊಡೆದು, ಅಪಹಾಸ್ಯ ಮಾಡಿದರು.
ಪೇತ್ರನು ಮನೆಯ ಹೊರಗೆ ಕಾಯುತ್ತಿದ್ದನು. ದಾಸಿಯೊಬ್ಬಳು ಅವನನ್ನು ನೋಡಿದಳು. ಅವಳು ಅವನಿಗೆ, "ನೀನು ಸಹ ಯೇಸುವಿನೊಂದಿಗೆ ಇದ್ದವನು!" ಎಂದು ಹೇಳಿದಳು. ಪೇತ್ರನು ಅದನ್ನು ನಿರಾಕರಿಸಿದನು. ಅನಂತರ ಇನ್ನೊಬ್ಬ ದಾಸಿಯು ಹಾಗೆಯೇ ಹೇಳಿದಳು, ಪೇತ್ರನು ಮತ್ತೆ ನಿರಾಕರಿಸಿದನು. ಅಂತಿಮವಾಗಿ ಸ್ವಲ್ಪ ಜನರು, "ನೀನು ಯೇಸುವಿನೊಂದಿಗೆ ಇದ್ದವನು ಎಂದು ನಮಗೆ ತಿಳಿದಿದೆ ಏಕೆಂದರೆ ನೀವಿಬ್ಬರೂ ಗಲಿಲಾಯದಿಂದ ಬಂದವರಾಗಿದ್ದೀರಿ" ಎಂದು ಹೇಳಿದರು.
ಆಗ ಪೇತ್ರನು, "ನಾನು ಈ ಮನುಷ್ಯನನ್ನು ಬಲ್ಲವನಾಗಿದ್ದರೆ ದೇವರು ನನ್ನನ್ನು ಶಪಿಸಲಿ!" ಎಂದು ಹೇಳಿದನು. ಪೇತ್ರನು ಹೀಗೆ ಅಣೆಯಿಟ್ಟು ಹೇಳಿದ ತಕ್ಷಣವೇ ಕೋಳಿಯು ಕೂಗಿತು. ಯೇಸು ತಿರುಗಿಕೊಂಡು ಪೇತ್ರನನ್ನು ನೋಡಿದನು.
ಪೇತ್ರನು ಹೊರಗೆ ಹೋಗಿ ವ್ಯಥೆಪಟ್ಟು ಅತ್ತನು. ಅದೇ ಸಮಯದಲ್ಲಿ, ಯೇಸುವನ್ನು ದ್ರೋಹದಿಂದ ಹಿಡಿದುಕೊಟ್ಟಿದ್ದ ಯೂದನು, ಯೆಹೂದ್ಯ ಮುಖಂಡರು ಯೇಸುವಿಗೆ ಮರಣದಂಡನೆಯ ತೀರ್ಪನ್ನು ವಿಧಿಸಿದನ್ನು ನೋಡಿದನು. ಯೂದನು ದುಃಖಿತನಾದನು ಮತ್ತು ಅವನು ಹೋಗಿ ಆತ್ಮಹತ್ಯೆ ಮಾಡಿಕೊಂಡನು.
ಆ ಸಮಯದಲ್ಲಿ ಪಿಲಾತನು ರಾಜ್ಯಪಾಲನಾಗಿದ್ದನು. ಅವನು ರೋಮ್ ಸಾಮ್ರಾಜ್ಯಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದನು. ಯೆಹೂದ್ಯ ಮುಖಂಡರು ಯೇಸುವನ್ನು ಅವನ ಬಳಿಗೆ ಕರೆತಂದರು. ಪಿಲಾತನು ಯೇಸುವನ್ನು ಅಪರಾಧಿಯೆಂದು ನಿರ್ಣಯಿಸಿ ಆತನನ್ನು ಕೊಲ್ಲಿಸಬೇಕೆಂದು ಎಂದು ಅವರು ಬಯಸಿದರು. ಆಗ ಪಿಲಾತನು ಯೇಸುವಿಗೆ, "ನೀನು ಯೆಹೂದ್ಯರ ಅರಸನೋ?" ಎಂದು ಕೇಳಿದನು.
ಯೇಸು, “ನೀನು ಸತ್ಯವನ್ನು ಹೇಳಿದ್ದಿ, ಆದರೆ ನನ್ನ ರಾಜ್ಯವು ಈ ಲೋಕದಲ್ಲಿಲ್ಲ. ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನನ್ನ ಸೇವಕರು ನನಗಾಗಿ ಹೋರಾಡುತ್ತಿದ್ದರು. ದೇವರ ಕುರಿತು ಸತ್ಯವನ್ನು ಹೇಳಲು ನಾನು ಈ ಲೋಕಕ್ಕೆ ಬಂದಿದ್ದೇನೆ. ಸತ್ಯವನ್ನು ಪ್ರೀತಿಸುವ ಪ್ರತಿಯೊಬ್ಬರು ನನ್ನಲ್ಲಿ ಕಿವಿಗೊಡುತ್ತಾರೆ" ಎಂದು ಉತ್ತರಕೊಟ್ಟನು. ಪಿಲಾತನು, "ಸತ್ಯ ಎಂದರೇನು?" ಎಂದು ಕೇಳಿದನು.
ಯೇಸುವಿನೊಂದಿಗೆ ಮಾತನಾಡಿದ ನಂತರ, ಪಿಲಾತನು ಜನಸಮೂಹದ ಬಳಿಗೆ ಹೋಗಿ, "ಈ ಮನುಷ್ಯನಲ್ಲಿ ಮರಣಕ್ಕೆ ಯೋಗ್ಯವಾಗಿರುವ ಯಾವ ಕಾರಣವು ನನಗೆ ಕಾಣುತ್ತಿಲ್ಲ" ಎಂದು ಹೇಳಿದನು. ಆದರೆ ಯೆಹೂದ್ಯ ಮುಖಂಡರು ಮತ್ತು ಜನಸಮೂಹವು "ಆತನನ್ನು ಶಿಲುಬೆಗೇರಿಸು" ಎಂದು ಕೂಗಿದರು. ಪಿಲಾತನು, "ಆತನು ಯಾವ ತಪ್ಪನ್ನು ಮಾಡಿಲ್ಲ, ಆತನು ತಪ್ಪಿತಸ್ಥನಲ್ಲ" ಎಂದು ಹೇಳಿದನು. ಆದರೆ ಅವರು ಇನ್ನೂ ಜೋರಾಗಿ ಕೂಗಿದರು. ಆಗ ಪಿಲಾತನು ಮೂರನೆಯ ಬಾರಿ "ಅವನು ತಪ್ಪಿತಸ್ಥನಲ್ಲ" ಎಂದು ಹೇಳಿದನು.
ಜನಸಮೂಹವು ದಂಗೆ ಏಳಬಹುದೆಂದು ಪಿಲಾತನು ಹೆದರಿದನು, ಆದ್ದರಿಂದ ಅವನು ತನ್ನ ಸೈನಿಕರು ಯೇಸುವನ್ನು ಶಿಲುಬೆಗೇರಿಸುವರು ಎಂದು ಒಪ್ಪಿಕೊಂಡನು. ರೋಮನ್ ಸೈನಿಕರು ಯೇಸುವನ್ನು ಕೊರಡೆಯಿಂದ ಹೊಡೆದರು ಮತ್ತು ರಾಜರ ನಿಲುವಂಗಿಯನ್ನು ಉಡಿಸಿದರು ಮತ್ತು ಆತನ ತಲೆಯ ಮೇಲೆ ಮುಳ್ಳುಗಳಿಂದ ಮಾಡಿದ ಕಿರೀಟವನ್ನು ಇಟ್ಟರು. ನಂತರ ಅವರು "ಇಗೋ, ಯೆಹೂದ್ಯರ ಅರಸನು!" ಎಂದು ಹೇಳುವ ಮೂಲಕ ಆತನನ್ನು ಅಪಹಾಸ್ಯ ಮಾಡಿದರು.