unfoldingWord 30 - ಯೇಸು ಐದು ಸಾವಿರ ಜನರಿಗೆ ಊಟವನ್ನು ವದಗಿಸಿದ್ದು
إستعراض: Matthew 14:13-21; Mark 6:31-44; Luke 9:10-17; John 6:5-15
رقم النص: 1230
لغة: Kannada
الجماهير: General
فصيل: Bible Stories & Teac
الغرض: Evangelism; Teaching
نص من الإنجيل: Paraphrase
حالة: Approved
هذا النص هو دليل أساسى للترجمة والتسجيلات فى لغات مختلفة. و هو يجب ان يعدل ليتوائم مع اللغات و الثقافات المختلفة لكى ما تتناسب مع المنطقة التى يستعمل بها. قد تحتاج بعض المصطلحات والأفكار المستخدمة إلى شرح كامل أو قد يتم حذفها فى ثقافات مختلفة.
النص
ಜನರಿಗೆ ಉಪದೇಶಿಸಲು ಮತ್ತು ಬೋಧಿಸಲು ಯೇಸು ತನ್ನ ಅಪೊಸ್ತಲರನ್ನು ಬೇರೆ ಬೇರೆ ಹಳ್ಳಿಗಳಿಗೆ ಕಳುಹಿಸಿದನು. ಯೇಸು ಇದ್ದಲ್ಲಿಗೆ ಅವರು ಹಿಂದಿರುಗಿ ಬಂದಾಗ, ಅವರು ತಾವು ಮಾಡಿದ್ದನ್ನೂ ಆತನಿಗೆ ಹೇಳಿದರು. ತರುವಾಯ ಯೇಸು ಅವರಿಗೆ ಸರೋವರದ ಆಚೇ ಕಡೆಯಲ್ಲಿರುವ ಏಕಾಂತ ಸ್ಥಳಕ್ಕೆ ತನ್ನೊಂದಿಗೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ ಎಂದು ಆಹ್ವಾನಿಸಿದನು. ಆದ್ದರಿಂದ, ಅವರು ದೋಣಿಯನ್ನು ಹತ್ತಿ ಸರೋವರದ ಆಚೇ ಕಡೆಗೆ ಹೋದರು.
ಆದರೆ ಯೇಸುವು ಮತ್ತು ಶಿಷ್ಯರು ದೋಣಿಯಲ್ಲಿ ಹೋಗುವುದನ್ನು ನೋಡಿದಂಥ ಅನೇಕ ಜನರಿದ್ದರು. ಈ ಜನರು ಅವರಿಗಿಂತ ಮೊದಲು ಆಚೇ ದಡಕ್ಕೆ ಹೋಗಲು ಸರೋವರದ ದಡದಲ್ಲಿ ಓಡಿಹೋದರು. ಆದ್ದರಿಂದ ಯೇಸು ಮತ್ತು ಶಿಷ್ಯರು ಬಂದಾಗ, ಅವರಿಗಾಗಿ ಕಾಯುತ್ತಿದ್ದ ದೊಡ್ಡ ಜನಸಮೂಹವು ಅಲ್ಲಿತ್ತು.
ಸ್ತ್ರೀಯರ ಮತ್ತು ಮಕ್ಕಳ ಲೆಕ್ಕವನ್ನು ಹೊರತುಪಡಿಸಿ, ಜನಸಮೂಹದಲ್ಲಿ 5,000 ಕ್ಕಿಂತ ಹೆಚ್ಚು ಗಂಡಸರಿದ್ದರು ಯೇಸುವಿಗೆ ಈ ಜನರು ಕುರುಬನಿಲ್ಲದ ಕುರಿಗಳಂತೆ ಇದ್ದಾರೆ ಎಂದು ತಿಳಿದು ಜನರ ವಿಷಯದಲ್ಲಿ ಬಹು ಕನಿಕರಪಟ್ಟನು. . ಆದ್ದರಿಂದ ಆತನು ಅವರಿಗೆ ಬೋಧಿಸಿದನು ಮತ್ತು ಅವರ ಮಧ್ಯದಲ್ಲಿ ರೋಗಿಗಳಾಗಿದ್ದ ಜನರನ್ನು ಗುಣಪಡಿಸಿದನು.
ಸಂಜೆಯಾದಾಗ ಶಿಷ್ಯರು ಯೇಸುವಿಗೆ, "ಹೊತ್ತು ಹೋಯಿತು ಮತ್ತು ಹತ್ತಿರದಲ್ಲಿ ಯಾವ ಊರುಗಳಿಲ್ಲ. ಆದ್ದರಿಂದ ಅವರು ಹೋಗಿ ಊಟಕ್ಕಾಗಿ ಏನನ್ನಾದರೂ ಕೊಂಡುಕೊಳ್ಳುವಂತೆ ಜನರನ್ನು ಕಳುಹಿಸಿಬಿಡು" ಎಂದು ಹೇಳಿದರು.
ಆದರೆ ಯೇಸು ಶಿಷ್ಯರಿಗೆ, "ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ" ಎಂದು ಹೇಳಿದನು. ಅವರು, "ನಾವು ಅದನ್ನು ಹೇಗೆ ಮಾಡಲಿ? ನಮ್ಮಲ್ಲಿ ಕೇವಲ ಐದು ರೊಟ್ಟಿಗಳು ಮತ್ತು ಎರಡು ಚಿಕ್ಕ ಮೀನುಗಳಿವೆ" ಎಂದು ಹೇಳಿದರು.
ಒಂದೊಂದು ಗುಂಪಿನಲ್ಲಿ ಐವತ್ತೈವತ್ತು ಜನರಾಗಿ ಹುಲ್ಲಿನ ಮೇಲೆ ಕುಳಿತುಕೊಳ್ಳಿರಿ ಎಂದು ಜನಸಮೂಹಕ್ಕೆ ಹೇಳುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು.
ಆಗ ಯೇಸು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಆಹಾರಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು.
ಅನಂತರ ಯೇಸು ರೊಟ್ಟಿಯನ್ನು ಮತ್ತು ಮೀನನ್ನು ತುಂಡುಗಳಾಗಿ ಮುರಿದನು. ಅದನ್ನು ಆತನು ತನ್ನ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸದನು.. ಶಿಷ್ಯರು ಜನರಿಗೆ ಆಹಾರವನ್ನು ಕೊಡುತ್ತಿದ್ದರು, ಆದರೆ ಅದು ಮುಗಿದುಹೋಗಲಿಲ್ಲ! ಜನರೆಲ್ಲರು ತಿಂದು ತೃಪ್ತರಾದರು.
ಅದಾದನಂತರ, ತಿನ್ನದೇ ಉಳಿದಿದ್ದ ಆಹಾರವನ್ನು ಶಿಷ್ಯರು ಕೂಡಿಸಲು, ಅದು ಹನ್ನೆರಡು ಬುಟ್ಟಿಗಳು ತುಂಬುವಷ್ಟಿತ್ತು! ಈ ಆಹಾರವೆಲ್ಲವು ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಬಂದ್ದದಾಗಿತ್ತು.