unfoldingWord 40 - ಯೇಸುವನ್ನು ಶಿಲುಬೆಗೇರಿಸಿದ್ದು
ዝርዝር: Matthew 27:27-61; Mark 15:16-47; Luke 23:26-56; John 19:17-42
የስክሪፕት ቁጥር: 1240
ቋንቋ: Kannada
ታዳሚዎች: General
ዓላማ: Evangelism; Teaching
Features: Bible Stories; Paraphrase Scripture
ሁኔታ: Approved
ስክሪፕቶች ወደ ሌሎች ቋንቋዎች ለመተርጎም እና ለመቅዳት መሰረታዊ መመሪያዎች ናቸው። ለእያንዳንዱ የተለየ ባህል እና ቋንቋ እንዲረዱ እና እንዲስማሙ ለማድረግ እንደ አስፈላጊነቱ ማስተካከል አለባቸው። አንዳንድ ጥቅም ላይ የዋሉ ቃላቶች እና ጽንሰ-ሐሳቦች የበለጠ ማብራሪያ ሊፈልጉ ወይም ሊተኩ ወይም ሙሉ ለሙሉ ሊተዉ ይችላሉ.
የስክሪፕት ጽሑፍ
ಸೈನಿಕರು ಯೇಸುವನ್ನು ಅಪಹಾಸ್ಯ ಮಾಡಿದ ಬಳಿಕ, ಅವರು ಆತನನ್ನು ಶಿಲುಬೆಗೆ ಹಾಕಲು ಕರೆದುಕೊಂಡು ಹೋದರು. ಆತನು ಯಾವ ಶಿಲುಬೆಯ ಮೇಲೆ ಸಾಯಬೇಕಾಗಿತ್ತೋ ಆ ಶಿಲುಬೆಯನ್ನು ಆತನು ಹೊರುವಂತೆ ಅವರು ಮಾಡಿದರು.
ಸೈನಿಕರು ಯೇಸುವನ್ನು "ಕಪಾಲಸ್ಥಳ" ಎಂದು ಕರೆಯಲ್ಪಡುವ ಸ್ಥಳಕ್ಕೆ ಕರೆತಂದರು ಮತ್ತು ಆತನ ಕೈ ಕಾಲುಗಳನ್ನು ಮೊಳೆಯಿಂದ ಶಿಲುಬೆಗೆ ಜಡಿದರು. ಆದರೆ ಯೇಸು, "ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು" ಎಂದು ಹೇಳಿದನು. ಅವರು ಶಿಲುಬೆಯಲ್ಲಿ ಆತನ ತಲೆಯ ಮೇಲೆ ಒಂದು ಸಂಕೇತವನ್ನು ಹಾಕಿದರು. ಅದರಲ್ಲಿ "ಯೆಹೂದ್ಯರ ಅರಸನು" ಎಂದು ಹೇಳಲಾಗಿತ್ತು. ಪಿಲಾತನು ಹೀಗೆ ಬರೆಯಲು ಹೇಳಿದ್ದನು.
ಅನಂತರ ಸೈನಿಕರು ಯೇಸುವಿನ ವಸ್ತ್ರಕ್ಕಾಗಿ ಚೀಟು ಹಾಕಿದರು. ಅವರು ಇದನ್ನು ಮಾಡಿದಾಗ, "ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು" ಎಂಬ ಪ್ರವಾದನೆಯನ್ನು ಅವರು ನೆರವೇರಿಸಿದರು.
ಸೈನಿಕರು ಅದೇ ಸಮಯದಲ್ಲಿ ಶಿಲುಬೆಗೇರಿಸಿದ ಇಬ್ಬರು ಕಳ್ಳರು ಸಹ ಇದ್ದರು. ಅವರನ್ನು ಯೇಸುವಿನ ಎಡಬಲಗಡೆಗಳಲ್ಲಿ ಶಿಲುಬೆಗೇರಿಸಿದರು. ಕಳ್ಳರಲ್ಲಿ ಒಬ್ಬನು ಯೇಸುವನ್ನು ಅಪಹಾಸ್ಯ ಮಾಡಿದನು, ಆದರೆ ಇನ್ನೊಬ್ಬನು, "ದೇವರು ನಿನ್ನನ್ನು ಶಿಕ್ಷಿಸುವನೆಂದು ನೀನು ಭಯಪಡುವುದಿಲ್ಲವೋ? ನಾವು ಅನೇಕ ತಪ್ಪು ಕೆಲಸಗಳನ್ನು ಮಾಡಿದ ಅಪರಾಧಗಳಾಗಿದ್ದೇವೆ, ಆದರೆ ಈ ಮನುಷ್ಯನು ನಿರಾಪರಾಧಿ" ಎಂದು ಹೇಳಿದನು. ಆಗ ಅವನು ಯೇಸುವಿಗೆ, "ನೀನು ನಿನ್ನ ರಾಜ್ಯದಲ್ಲಿ ಅರಸನಾಗುವಾಗ ನನ್ನನ್ನು ನೆನಪಿಸಿಕೋ" ಎಂದು ಹೇಳಿದನು. ಯೇಸು ಅವನಿಗೆ, “ಈಹೊತ್ತು ನೀನು ನನ್ನೊಂದಿಗೆ ಪರದೈಸಿನಲ್ಲಿ ಇರುವಿ” ಎಂದು ಹೇಳಿದನು.
ಯೆಹೂದ್ಯ ಮುಖಂಡರು ಮತ್ತು ಜನಸಮೂಹದಲ್ಲಿರುವ ಇತರ ಜನರು ಯೇಸುವನ್ನು ಅಪಹಾಸ್ಯ ಮಾಡಿದರು. ಅವರು ಆತನಿಗೆ, "ನೀನು ದೇವರ ಮಗನಾಗಿದ್ದರೆ ಶಿಲುಬೆಯಿಂದ ಇಳಿದು ನಿನ್ನನ್ನು ನೀನೇ ರಕ್ಷಿಸಿಕೋ. ಹಾಗಾದರೆ ನಾವು ನಿನ್ನನ್ನು ನಂಬುತ್ತೇವೆ" ಎಂದು ಹೇಳಿದರು.
ಆಗ ನಡುಮಧ್ಯಾಹ್ನ ಆಗಿದ್ದರೂ ಸಹ ಆ ಪ್ರದೇಶದ ಮೇಲೆಲ್ಲಾ ಕತ್ತಲೆಯ ಮೋಡವು ಕವಿಯಿತು. ಮಧ್ಯಾಹ್ನದಲ್ಲಿ ಕತ್ತಲೆಯಾಯಿತು ಮತ್ತು ಮೂರು ಗಂಟೆಗಳ ಕಾಲ ಅಲ್ಲಿ ಕತ್ತಲೆಯಾಗಿತು.
ಆಗ ಯೇಸು, "ತೀರಿತು!, ತಂದೆಯೇ, ನಾನು ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ" ಎಂದು ಕೂಗಿ ಹೇಳಿದನು. ಆಗ ಆತನು ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು. ಆತನು ಸತ್ತಾಗ ಭೂಕಂಪ ಉಂಟಾಯಿತು. ದೇವಾಲಯದಲ್ಲಿ ದೇವರ ಪ್ರಸನ್ನತೆಯಿಂದ ಜನರನ್ನು ಬೇರ್ಪಡಿಸಿದ ದೊಡ್ಡ ಪರದೆ ಮೇಲಿನಿಂದ ಕೆಳಕ್ಕೆ ಎರಡು ಭಾಗವಾಗಿ ಹರಿದುಹೋಯಿತು.
ಯೇಸು ತನ್ನ ಮರಣದ ಮೂಲಕ, ಜನರು ದೇವರ ಬಳಿಗೆ ಬರಲು ಮಾರ್ಗವನ್ನು ತೆರೆದನು. ಯೇಸುವನ್ನು ಕಾಯುತ್ತಿದ್ದ ಸೈನಿಕನು ನಡೆಯುತ್ತಿರುವುದ್ದನ್ನೆಲ್ಲ ನೋಡಿ, "ಖಂಡಿತವಾಗಿಯೂ, ಈ ಮನುಷ್ಯನು ನಿರಾಪರಾಧಿಯು, ಈತನು ದೇವರ ಮಗನು ಆಗಿದ್ದಾನೆ" ಎಂದು ಹೇಳಿದನು.
ಆಗ ಯೋಸೇಫನು ಮತ್ತು ನಿಕೋದೇಮನು ಎಂಬ ಇಬ್ಬರು ಯೆಹೂದ್ಯ ಮುಖಂಡರು ಬಂದರು. ಯೇಸು ಮೆಸ್ಸೀಯನೆಂದು ಅವರು ನಂಬಿದ್ದರು. ಅವರು ಯೇಸುವಿನ ದೇಹವನ್ನು ಕೊಡಬೇಕೆಂದು ಪಿಲಾತನನ್ನು ಬೇಡಿಕೊಂಡರು. ಅವರು ಆತನ ದೇಹವನ್ನು ಬಟ್ಟೆಯಲ್ಲಿ ಸುತ್ತಿಟ್ಟರು. ನಂತರ ಅವರು ಅದನ್ನು ಬಂಡೆಯಲ್ಲಿ ಕೆತ್ತಲ್ಪಟ್ಟಿದ್ದ ಸಮಾಧಿಗೆ ತೆಗೆದುಕೊಂಡು ಹೋಗಿ ಅದರೊಳಗೆ ಇಟ್ಟರು. ಅನಂತರ ಅವರು ಅದರ ದ್ವಾರವನ್ನು ಮುಚ್ಚಲು ಸಮಾಧಿಯ ಮುಂದೆ ಒಂದು ದೊಡ್ಡ ಕಲ್ಲನ್ನು ಉರುಳಿಸಿದರು.